ಅಪರಾಧಬೆಂಗಳೂರು

ಒಂಟಿಯಾಗಿ ವಾಸವಾಗಿದ್ದ ನಿವೃತ್ತ ಶಿಕ್ಷಕಿ ಕೊಲೆ ಮಾಡಿದ್ದ ಇಬ್ಬರ ಸೆರೆ

ಆಭರಣಗಳನ್ನು ದೋಚುವ ಸಲುವಾಗಿ ಒಂಟಿಯಾಗಿ ವಾಸವಾಗಿದ್ದ ನಿವೃತ್ತ ಶಿಕ್ಷಕಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎದುರು ಮನೆ ನಿವಾಸಿ ಸೇರಿದಂತೆ ಇಬ್ಬರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 68ಗ್ರಾಂ ಚಿನ್ನಾಭರಣ, ಬೈಕ್ ಹಾಗೂ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರದ ನಾಗೇಂದ್ರ (31) ಮತ್ತು ಆಂಧ್ರಪ್ರದೇಶದ ರಾಮರಾಜು ಅಲಿಯಾಸ್ ವಿಜಯ್ (28) ಬಂಧಿತರು.

ಅಂಬಾಭವಾನಿ ಲೇಔಟ್, 1ನೇ ಹಂತದ ಮನೆಯೊಂದರ 2ನೇ ಮಹಡಿಯಲ್ಲಿ ನಿವೃತ್ತ ಶಿಕ್ಷಕಿ ಪ್ರಸನ್ನಕುಮಾರಿ (68) ಅವರು ಒಂಟಿಯಾಗಿ ವಾಸಿಸುತ್ತಿದ್ದರು. ಇವರು ಮೂಲತಃ ಆಂಧ್ರಪ್ರದೇಶದ ವಿಜಯವಾಡದವರು.

ಸೆ.8ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆ ನಡುವೆ ಇವರ ಮನೆಗೆ ದುಷ್ಕರ್ಮಿಗಳು ನುಗ್ಗಿ ಪ್ರಸನ್ನಕುಮಾರಿ ಅವರ ಕೈ-ಕಾಲುಗಳನ್ನು ಕಟ್ಟಿ, ಬಲಪ್ರಯೋಗಿಸಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿ, ಅವರ ಮೈ ಮೇಲಿ ಧರಿಸಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಈ ಬಗ್ಗೆ ಕಟ್ಟಡದ ಮಾಲೀಕರು ನೀಡಿದ ದೂರಿನನ್ವಯ ವಿದ್ಯಾರಣ್ಯ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಮೇಲಾಧಿಕಾರಿಗಳ ಮಾರ್ಗ ದರ್ಶನ ದಲ್ಲಿ ವಿದ್ಯಾರಣ್ಯಪುರ ಪೊಲೀಸರು ತಂಡಗಳಾಗಿ ರಚನೆ ಮಾಡಿಕೊಂಡು, ಘಟನಾ ಸುತ್ತಮುತ್ತಲ ರಸ್ತೆಗಳು, ಮನೆಗಳ ಬಳಿ ಅಳವಡಿಸಲಾಗಿದ್ದ ಸಿಸಿ ಟಿವಿಗಳ ಪುಟೇಜ್‍ಗಳನ್ನು ಪರಿಶೀಲಿಸಿ ಅದರಲ್ಲಿನ ದೃಶ್ಯಾವಗಳಿಗಳು ಹಾಗೂ ಭಾತ್ಮಿದಾರರ ಮಾಹಿತಿ ಮೇರೆಗೆ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ನಾಗೇಂದ್ರನು ನಿವೃತ್ತ ಶಿಕ್ಷಕಿ ಪ್ರಸನ್ನಕುಮಾರಿ ಅವರ ಮನೆಯ ಎದುರು ಮನೆಯಲ್ಲೇ ವಾಸವಿದ್ದು, ಅವರ ಚಲನವಲನಗಳನ್ನು ಗಮನಿಸುತ್ತಿದ್ದನು.

ಪ್ರಸನ್ನಕುಮಾರಿ ಅವರ ಮನೆಗೆ ಯಾರೂ ಬರುವುದಿಲ್ಲವೆಂಬ ಬಗ್ಗೆ ತಿಳಿದುಕೊಂಡಿದ್ದಾನೆ. ಅಲ್ಲದೆ ಅವರು ಮೈ ಮೇಲೆ ಚಿನ್ನಾಭರಣಗಳನ್ನು ಧರಿಸಿಕೊಂಡು ಓಡಾಡುವುದನ್ನು ಗಮನಿಸಿದ್ದಾನೆ.

ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ತನ್ನ ಸ್ನೇಹಿತಾದ ಆಂಧ್ರ ಪ್ರದೇಶದ ರಾಮರಾಜು ಹಾಗೂ ಇನ್ನೊಬ್ಬನೊಂದಿಗೆ ಸೇರಿ ಪ್ರಸನ್ನಕುಮಾರಿ ಅವರನ್ನು ಕೊಲೆ ಮಾಡಿ, ಚಿನ್ನಾಭರಣಗಳನ್ನು ದೋಚಲು ನಾಗೇಂದ್ರ ಸಂಚು ರೂಪಿಸಿದ್ದಾನೆ.

ಅದರಂತೆ ಸೆ.8ರಂದು ಮಧ್ಯಾಹ್ನ 2 ಗಂಟೆಯಿಂದ 3 ಗಂಟೆ ನಡುವಿನ ಅವಯಲ್ಲಿ ಪ್ರಸನ್ನಕುಮಾರಿ ಅವರು ವಾಸವಿದ್ದ ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿ ಆಭರಣಗಳೊಂದಿಗೆ ಪರಾರಿಯಾಗಿದ್ದರು.

ದೋಚಿದ ಚಿನ್ನಾಭರಣಗಳನ್ನು ಆರೋಪಿ ರಾಮರಾಜು ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅನ್ನಮಯ್ಯ ಜಿಲ್ಲೆಯ ರ್ಯಾಚೋಟಿಯಲ್ಲಿರುವ ಮುತ್ತೂಟ್ ಫೈನಾನ್ಸ್‍ನಲ್ಲಿ ಅಡಮಾನವಿಟ್ಟು 1.90ಲಕ್ಷ ರೂ.

ಹಣವನ್ನು ಪಡೆದುಕೊಂಡು ಆರೋಪಿಗಳೆಲ್ಲರೂ ಹಂಚಿಕೊಂಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 68 ಗ್ರಾಂ ತೂಕದ 2 ಚಿನ್ನದ ಬಳೆಗಳು, ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಯಮಹಾ ಬೈಕ್ ಹಾಗೂ 2 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಶೋಧ ಕಾರ್ಯ ಮುಂದುವರೆದಿದೆ.

ಮಾರ್ಗದರ್ಶನ, ಸಲಹೆ ಹಾಗೂ ಸೂಚನೆಯಂತೆ ಇನ್ಸ್‍ಪೆಕ್ಟರ್ ಸುಂದರ್ ಅವರನ್ನೊಳಗೊಂಡ ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚು ಬಂಸುವಲ್ಲಿ ಯಶಸ್ವಿಯಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button