
ಐಪಿಎಲ್ ಬೆಟ್ಟಿಂಗ್ ದಂಧೆ ಯಾವುದೇ ನಿಯಂತ್ರಣವಿಲ್ಲದೆ ನಾನಾ ರೂಪಗಳಲ್ಲಿ ನಿರಾತಂಕವಾಗಿ ಸಾಗುತ್ತಿದೆ.
ಮಂಡ್ಯದಲ್ಲಿ ಐಪಿಎಲ್ ಬೆಟ್ಟಿಂಗ್ ಹುಚ್ಚಿಗೆ ಬಲಿಯಾದ ವ್ಯಕ್ತಿ ಪರಾರಿಯಾಗಿದ್ದು, ಆತನ ಹೆಂಡತಿ ಮಕ್ಕಳು ಸೇರಿದಂತೆ ಇಡೀ ಕುಟುಂಬವೇ ಬೀದಿಗೆ ಬಿದ್ದಿದೆ.
ಐಪಿಎಲ್ ಬೆಟ್ಟಿಂಗ್‌ನಲ್ಲಿ ಸೋತ ಪತಿ ಸುರೇಶ್ ಮನೆ ಬಿಟ್ಟು ಪರಾರಿಯಾಗಿದ್ದಾನೆ.
ಪತ್ನಿ ಅನ್ನಪೂರ್ಣ ಇಪ್ಪತ್ತು ದಿನದ ಹಸುಗೂಸಿನೊಂದಿಗೆ ಅನ್ನ ನೀರಿಲ್ಲದೆ ನಡು ಬೀದಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ತಿನ್ನಲು ಆಹಾರವಿಲ್ಲದೆ, ಮಲಗಲು ಸ್ಥಳವಿಲ್ಲದೆ ಅನ್ನಪೂರ್ಣವಯಸ್ಸಾದ ತಂದೆ ಮತ್ತು ಇಬ್ಬರು ಮಕ್ಕಳೊಂದಿಗೆ ಬೀದಿಯಲ್ಲಿದ್ದು, ಮುಂದೇನು ಜೀವನ ಎಂಬ ಪ್ರಶ್ನೆಗೆ ಉತ್ತರವಿಲ್ಲದೆ ನರಳುತ್ತಿದ್ದಾರೆ.
ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಸುರೇಶ್ ಮೈ ತುಂಬಾ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟ ತಾಳಲಾರದೆ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾನೆ.
ಮೂರು ತಿಂಗಳ ಗರ್ಭಿಣಿ ಇರುವಾಗ್ಲೆ ಪತ್ನಿ ಅನ್ನಪೂರ್ಣಗೆ ಕೈ ಕೊಟ್ಟು ಸುರೇಶ್ ಎಸ್ಕೇಪ್ ಆಗಿದ್ದು ಹೊಟ್ಟೆಪಾಡಿಗಾಗಿ ಆಕೆ ಕುಣಿಗಲ್‌ನಿಂದ ಮದ್ದೂರಿನ ಹೆಮ್ಮನಹಳ್ಳಿಗೆ ಬಂದಿದ್ದಾರೆ. ಆಗಿನಿಂದಲೂ ಬಟ್ಟೆ ವ್ಯಾಪಾರ, ಕೂಲಿ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದಾರೆ.
ಅನ್ನಪೂರ್ಣಗೆ ಇಪ್ಪತ್ತು ದಿನಗಳ ಹಿಂದೆ ಹರಿಗೆಯಾಗಿದೆ. ಮನೆಯಿಲ್ಲದೆ, ತಿನ್ನಲು ಅನ್ನವಿಲ್ಲದೆ ಗ್ರಾಮಸ್ಥರು ಕೊಟ್ಟ ಊಟ ತಿಂಡಿಯಿಂದಲೇ ಜೀವನ ಸಾಗಿಸುತ್ತಿದ್ದಾರೆ.