ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗಕ್ಕೆ ಕ್ಷಣಗಣನೆ

ಬೆಂಗಳೂರು : ಕೋವಿಡ್ ಕಾರಣ ಕಳೆದ ಎರಡು ವರ್ಷದಿಂದ ದೇವಾಲಯದ ಪ್ರಾಕಾರದೊಳಗೆ ಸೀಮಿತವಾಗಿದ್ದ ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ವಿಜೃಂಭಣೆಯಿಂದ ನಡೆಯಲು ನಗರದ ಹೃದಯ ಭಾಗದಲ್ಲಿರುವ ಧರ್ಮರಾಯಸ್ವಾಮಿ ದೇವಾಲಯ ಸಿಂಗಾರಗೊಂಡಿದೆ. ಕಳೆದ ಶುಕ್ರವಾರ ಏ.8 ರಾತ್ರಿಯಿಂದ ಶುರುವಾದ ಉತ್ಸವ ಇಂದು ಬೆಳಗಿನ ಜಾವ ತಿಗಳ ಜನಾಂಗದ ಮಹಿಳೆಯರು ಆರತಿ ದೀಪಗಳನ್ನು ಮಲ್ಲಿಗೆ ಹೂವಿಂದ ಸಿಂಗರಿಸಿ ದೇವರಿಗೆ ಆರತಿ ಬೆಳಗಿದರು. ಕ್ಷೇತ್ರದ ಶಾಸಕರಾದ ಉದಯ್ ಗರುಡಾಚಾರ್ ರವರ ಪತ್ನಿ ಮೇದಿನಿ ಗರುಡಾಚಾರ್ ರವರು ಉಪಸ್ಥಿತಿ ಇದ್ದು ಜನಾಂಗದ ಮಹಿಳೆಯರ ಜೊತೆ ಆರತಿ ದೀಪ ಹೊತ್ತು ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು
ಹೆಮ್ಮೆಯ ಪ್ರತೀಕ : ಕರಗ ಮಹೋತ್ಸವವು ಅತ್ಯಂತ ಹಳೆಯ ಹಬ್ಬವಾಗಿದ್ದು, 300 ವರ್ಷಗಳಿಂದ ನಡೆಸಲಾಗುತ್ತಿದೆ. ಕರಗವು ಜಾನಪದ ನೃತ್ಯದ ಹಬ್ಬವಾಗಿದ್ದು, ಬೆಂಗಳೂರು ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ. ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹಬ್ಬದ ಆಚರಣೆ ಆರಂಭವಾಗುತ್ತದೆ. ಧರ್ಮರಾಯಸ್ವಾಮಿ ದೇವಸ್ಥಾನ ದೇಶದಲ್ಲಿ ಪಾಂಡವರಿಗೆ ಮೀಸಲಾದ ಏಕೈಕ ದೇವಾಲಯವಾಗಿದೆ
ಹಿಂದು ಕ್ಯಾಲೆಂಡರ್ ಪ್ರಕಾರ ಕರ್ನಾಟಕದಲ್ಲಿ ಪ್ರತಿವರ್ಷ ಚೈತ್ರ ಮಾಸದಲ್ಲಿ (ಮಾಚ್ ಏಪ್ರಿಲ್) ಕರಗ ಮಹೋತ್ಸವ ಆಚರಣೆ ಮಾಡಲಾಗುತ್ತದೆ. ಇದು ಬೆಂಗಳೂರು ಕರಗ ಮಹೋತ್ಸವವೆಂದೇ ಖ್ಯಾತಿ ಪಡೆದಿದೆ. ತಿಗಳರ ಸಮುದಾಯ ಈ ಹಬ್ಬವನ್ನು ಆಚರಿಸುತ್ತದೆ. ಮಹಭಾರತದ ಆದರ್ಶ ಮಹಿಳೆ ಮತ್ತು ಶಕ್ತಿ ದೇವತೆಯಾದ ದೌಪ್ರದಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಹಬ್ಬ ಆಚರಣೆ ಮಾಡಲಾಗುತ್ತಿದೆ. ಅದರಂತೆ ಏ.16ರಂದು ಹುಣ್ಣಿಮ ರಾತ್ರಿ ಇಡೀ ಕರಗ ಮೆರವಣಿಗೆ ನಡೆಸಲಾಗುತ್ತದೆ.
ಇಂದು ಸಡಗರದ ‘ಹಸಿ ಕರಗ’ ಉತ್ಸವ
ಐತಿಹಾಸಿಕ ಬೆಂಗಳೂರು ಕರಗ ಮಹೋತವ ಆರಂಭಗೊಂಡು 7ನೇ ದಿನ ಗುರುವಾರ ತಡರಾತ್ರಿ ಸಡಗರದ ಹಸಿ ಕರಗ’ ಉತ್ಸವ ಜರುಗಲಿದೆ.
ಶ್ರೀಧರ್ಮರಾಯ ಸ್ವಾಮಿ ದೇವಸ್ಥಾನ ದಲ್ಲಿ ಕಳೆದ ಏ.8ರಿಂದ ಆರಂಭಗೊಂಡ ಕರಗ ಕೈಂಕರ್ಯಗಳು, ವಿಧಿ ವಿಧಾನಗಳು ಮುಂದುವರಿದು, ಗುರುವಾರ ತಡರಾತ್ರಿ (ಶುಕ್ರವಾರ ಮುಂಜಾನ 3 ಗಂಟೆಗೆ ಕಬ್ಬನ್ ಉದ್ಯಾನದಲ್ಲಿನ ಸಂಪಂಗಿ ಅಂಗಳ ಶಕ್ತಿ ಪೀಠದಲ್ಲಿ ದ್ರೌಪದಮ್ಮ ದೇವರಿಗೆ ವಿಶೇಷ ಪೂಜೆಗಳು ನೆರವೇರಲಿದೆ. ನಂತರ ಅಲ್ಲಿಂದ ‘ಹಸಿ ಕರಗ ಉತ್ಸವ’ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಸಾಗಲಿದೆ. ಜನರ ಪರಿಹಾರಕ್ಕಾಗಿ ದೌಪದಮ್ಮ ತ್ರಯೋದಶಿ
ಯಂದು(ಗುರುವಾರ) ಭೂಮಿಗೆ ಬರುತ್ತಾಳೆ. ಎಂಬ ನಂಬಿಕೆ ಇದೆ. ಈ ಸಂದರ್ಭವನ್ನು ‘ಹಸಿ ಕರಗ’ ಎಂದು ಬಹುಕಾಲದಿಂದಲೂ
ಆಚರಿಸಿಕೊಂಡು ಬರಲಾಗುತ್ತಿದೆ. ಇದರ ಪ್ರಯುಕ್ತ ಸಂಜೆಯಿಂದಲೇ ದೇವರ ಮೂರ್ತಿ ಪೂಜೆ, ಅಲಂಕಾರಗಳು ನಡೆಯಲಿದೆ. ನಂತರ ದೌಪದಮ್ಮನ ಮೂರ್ತಿ ಕಂಕುಳಲ್ಲಿ ಇಟ್ಟುಕೊಂಡು ಸಂಪಂಗಿ ಅಂಗಳ ಶಕ್ತಿ ಪೀಠದಿಂದ ಸಾಗಿ ಬೆಳಗ್ಗೆ 7 ಗಂಟೆ ದೇವಸ್ಥಾನ ಸೇರಿ ಇದರೊಂದಿಗೆ ‘ಹಸಿ ಕರಗ ಆಚರಣೆ ಸಂಪನ್ನಗೊಳ್ಳಲಿದೆ. ಈ ವೇಳೆ ಸಾವಿರಾರು ವೀರಕುಮಾರರು,
ಪೂಜಾರಿ ಮನೆತನದವರು, ಭಕ್ತರು
ಸೇರಿದಂತೆ ಸಾವಿರಾರು ಮಂದಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಮರುದಿನ ಶುಕ್ರವಾರ ದೌಪದಮ್ಮ ದೇವಿಗೆ ರಾತ್ರಿ 12 ಗಂಟೆಯಿಂದ ವಿವಿಧ ಸೇವೆಗಳು ಆರಂಭವಾಗುತ್ತವೆ. ಪೊಂಗಲು ಸೇವೆ, ಪುರಾಣ ಕಥನದಂತಹ ಸೇವೆಗಳು ನಡೆಯಲಿದೆ. ಬಳಿಕ ಇದೇ ವೇಳೆ ಭಕ್ತರಿಗೆ ಪ್ರಸಾದ ಸೇವೆ ನಡೆಯಲಿದೆ. ಶನಿವಾರ ಪೌರ್ಣಮಿ ದಿನದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ ನಡೆಯಲಿದೆ