ಅಪಘಾತ

ಐಟಿ ಸಿಟಿಯಲ್ಲಿ ಭೀಕರ ಆ್ಯಕ್ಸಿಡೆಂಟ್​..! ಶಾಲಾ ಬಸ್ ಹರಿದು ಬಾಲಕಿ ದುರ್ಮರಣ..

NCIB ಬೆಂಗಳೂರು : ಐಟಿಸಿಟಿಯಲ್ಲಿ ಭೀಕರ ಆ್ಯಕ್ಸಿಡೆಂಟ್ ಆಗಿದ್ದು, ಶಾಲಾ ಬಸ್ ಹರಿದು ಬಾಲಕಿ ದುರ್ಮರಣ ಹೊಂದಿದ್ದಾಳೆ.ಬನಶಂಕರಿ ಟ್ರಾಫಿಕ್​​ ಠಾಣೆ ವ್ಯಾಪ್ತಿಯಲ್ಲಿ ಆ್ಯಕ್ಸಿಡೆಂಟ್​ ನಡೆದಿದೆ. ಶಾಲಾ ಬಸ್ ಹರಿದು ಹಾರೋಹಳ್ಳಿಯ 16 ವರ್ಷದ ಕೀರ್ತನ ಎಂಬ ಬಾಲಕಿ ದುರ್ಮರಣ ಹೊಂದಿದ್ದಾಳೆ. ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ. ಹರ್ಷಿತ, ಕೀರ್ತನ , ದರ್ಶನ್ ತ್ರಿಬಲ್ ರೈಡಿಂಗ್ ಬರುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ಬಸ್ ಬೈಕ್​​ಗೆ ಡಿಕ್ಕಿಹೊಡೆದಿದೆ.ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ಪ್ರಕರಣ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button