ಅಪರಾಧ

ಐಟಿಬಿಟಿ ಕ್ಯಾಂಪಿನಿಂದ ೨ ಎಕೆ೪೭ ರೈಫಲ್ ಕಳವು

ಐಟಿಬಿಟಿ ಕ್ಯಾಂಪಿನಿಂದ ಇಂಡೋ ಟಿಬೆಟಿಯನ್ ಗಡಿ ಪೊಲೀಸರಿಗೆ ಸೇರಿದ ಎರಡು ಎಕೆ೪೭ ರೈಫಲ್ ಕಳವು ಆಗಿರುವ ಘಟನೆ ಹಾಲಭಾವಿಯಲ್ಲಿ ನಡೆದಿದೆ.ಕ್ಯಾಂಪ್ ನಲ್ಲಿ ಬಿಗಿ ಪೊಲೀಸ್ ಭದ್ರತೆ ನಡುವೆಯೂ ಎಕೆ-೪೭ ರೈಫಲ್‌ಗಳು ಕಳ್ಳತನವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಇಂಡೋ ಟಿಬೆಟಿಯನ್ ಗಡಿ ಪೊಲೀಸರಾದ ರಾಜೇಶಕುಮಾರ, ಸಂದೀಪ ಮೀನಾ ಎಂಬುವವರಿಗೆ ಸೇರಿದ ಎರಡು ಎಕೆ – ೪೭ ಕಳ್ಳತನವಾಗಿವೆ.ನಕ್ಸಲ್ ನಿಗ್ರಹ ತರಬೇತಿಗಾಗಿ ಮಧುರೈನ ೪೫ನೇ ಬೆಟಾಲಿಯನ್ ಪೊಲೀಸ್ ಪಡೆಯು ಹಾಲಭಾವಿಗೆ ಆಗಮಿಸಿದೆ.

ಈ ಕ್ಯಾಂಪಿನಿಂದಲೇ ಎಕೆ – ೪೭ ರೈಫಲ್‌ಗಳ ಕಳ್ಳತನವಾಗಿದೆ.ಹಾಲಭಾವಿ ಗ್ರಾಮದ ಹೊರವಲಯದಲ್ಲಿ ಐಟಿಬಿಟಿ ಕ್ಯಾಂಪ್‌ನಲ್ಲಿ ಕಳೆದ ಆ.೧೭ರ ರಾತ್ರಿ ರೈಫಲ್‌ಗಳು ಕಳ್ಳತನವಾಗಿವೆ.ವಿಷಯ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡಸಿದ್ದಾರೆ.

ಸುತ್ತಲೂ ಬಿಗಿ ಭದ್ರತೆ ಸರ್ಪಗಾವಲು ಇದ್ದರೂ ಒಳನುಗ್ಗಿ ಅತ್ಯಾಧುನಿಕ ಶಸ್ತ್ರಾಸ್ತ್ರ ಎಗರಿಸಿ ಪರಾರಿಯಾಗಿರುವುದು ಆತಂಕ ಮೂಡಿಸಿದೆ.ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡ ಶೋಧಕಾರ್ಯ ನಡೆಸುತ್ತಿದೆ. ಕಳೆದ ೨೪ಗಂಟೆಗಳಿಂದಲೂ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಕಾಕತಿ ಪೊಲೀಸ್ ಠಾಣೆಯಲ್ಲಿ ಐಟಿಬಿಪಿಯಿಂದ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button