ರಾಜ್ಯ

ಐಎನ್‌ಎಸ್ ವಿಕ್ರಾಂತ್ ರಾಷ್ಟ್ರಕ್ಕೆ ಮೋದಿ ಸಮರ್ಪಣೆ

ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ ಬದಲಾಗಿ ೨೧ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.

ದೇಶದ ರಕ್ಷಣಾ ವಲಯವನ್ನು ಸ್ವಾವಲಂಬಿಯನ್ನಾಗಿ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಐಎನ್‌ಎಸ್ ವಿಕ್ರಾಂತ್ ಸೇರ್ಪಡೆ ಸ್ಪಷ್ಟ ಉದಾಹರಣೆ, ತನ್ನದೇ ಆದ ವಿಮಾನವಾಹಕ ನೌಕೆ ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಭಾರತ ಸೇರಿದಂತಾಗಿದ ಎಂದು ಹೇಳಿದ್ದಾರೆ.

ಕೇರಳದ ಕೊಚ್ಚಿನ್‌ನ ಶಿಪ್ ಯಾರ್ಡ್‌ನಲ್ಲಿ ದೇಶೀಯ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಿರುವ ಐಎನ್‌ಎಸ್ ವಿಕ್ರಾಂತ್ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಐಎನ್ ಎಸ್ ವಿಕ್ರಾಂತ್ ಅನ್ನು ಛತ್ರಪತಿ ಶಿವಾಜಿಗೆ ಅರ್ಪಿಸಿದ ಪ್ರಧಾನಿ ಮೋದಿ, ಗುರಿ ಎಷ್ಟೇ ಕಠಿಣವಾಗಿರಲಿ, ಎಷ್ಟೇ ದೊಡ್ಡ ಸವಾಲುಗಳಾಗಲಿ, ಭಾರತ ಯಾವುದೇ ಗುರಿ ಸಾಧಿಸುವುದು ಭಾರತಕ್ಕೆ ಅಸಾಧ್ಯವಲ್ಲ ಎಂದಿದ್ದಾರೆ.

ದೇಶೀಯ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಅತಿ ದೊಡ್ಡ ವಿಮಾನವಾಹಕ ನೌಕೆ ಐನ್‌ಎಸ್ ವಿಕ್ರಾಂತ್ ವಿವಿಧ ದೇಶಗಳ ಸಾಲಿಗೆ ಸೇರ್ಪಡೆಯಾಗಿದೆ, ಇದಕ್ಕಾಗಿ ಭಾರತೀಯ ನೌಕಾಪಡೆ, ಎಲ್ಲಾ ಇಂಜಿನಿಯರ್‍ಗಳು, ವಿಜ್ಞಾನಿಗಳು ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ನ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.ವಿಮಾನವಾಹಕ ನೌಕೆ ನಿರ್ಮಾಣ, ಭಾರತವನ್ನು ಜಾಗತಿಕ ದಿಗಂತದತ್ತ ಕೊಂಡೊಯ್ಯಲು ಸಹಕಾರಿಯಾಗಿದೆ.

ಜೊತೆಗೆ ಹೊಸ ವಿಶ್ವಾಸದಿಂದ ತುಂಬಿದೆ. ಇದೊಂದು ಈ ಐತಿಹಾಸಿಕ ಕ್ಷಣ. ಈ ಸಂದರ್ಭದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದಿದ್ಧಾರೆ.ಕೇರಳದ ಕಡಲತೀರದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಹೊಸ ಭವಿಷ್ಯದ ಸೂರ್ಯೋದಯಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಜಾಗತಿಕ ದಿಗಂತದಲ್ಲಿ ಭಾರತದ ನೈತಿಕತೆಯನ್ನು ಬಲಪಡಿಸುವ ಕರೆಯಾಗಿದೆ.

ಜೊತೆಗೆವಿಕ್ರಾಂತ್ ದೊಡ್ಡ ಮತ್ತು ಭವ್ಯವಾಗಿದೆ, ವಿಕ್ರಾಂತ್ ವಿಭಿನ್ನವಾಗಿದೆ, ವಿಕ್ರಾಂತ್ ವಿಶೇಷವಾಗಿದೆ ಎಂದಿದ್ದಾರೆ.ಸ್ವಾವಲಂಭಿ ಭಾರತಕ್ಕೆ ಸಹಕಾರಿ:ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಬಿಕ್ಕಟ್ಟುಗಳಿಗೆ ಮೊದಲ ಪ್ರತಿಸ್ಪಂದಕರಾಗಿ ಭಾರತೀಯ ನೌಕಾಪಡೆ ಯಾವಾಗಲೂ ಸಿದ್ಧವಾಗಿದೆ.

ಐಎನ್‌ಎಸ್ ಕಾರ್ಯಾರಂಭದಿಂದ ಭಾರತೀಯ ನೌಕಾಪಡೆಯ ಸಾಮಥ್ರ್ಯ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದ್ದಾರೆ.ಸ್ವಾವಲಂಬಿ ಭಾರತಕ್ಕಾಗಿ ನಮ್ಮ ಪ್ರಯತ್ನಕ್ಕೆ ಪ್ರತ್ಯೇಕ ನೀತಿಯಲ್ಲ ಎಂಬುದಕ್ಕೆ ಐಎನ್‌ಎಸ್ ವಿಕ್ರಾಂತ್‌ನ ಕಾರ್ಯಾರಂಭ ದೃಢೀಕರಣವಾಗಿದೆ. ಪ್ರಧಾನ ಮಂತ್ರಿ ನೇತೃತ್ವದಲ್ಲಿ ಭಾರತದಲ್ಲಿ ನಡೆಯುತ್ತಿರುವ ಬೃಹತ್ ಪರಿವರ್ತನಾ ಬದಲಾವಣೆಯ ಪ್ರಮುಖ ಭಾಗವಾಗಿದೆ ಎಂದಿದ್ದಾರೆ.

ಮುಂದಿನ ೨೫ ವರ್ಷಗಳಲ್ಲಿ ಭದ್ರತೆ. “ಇದು ಭಾರತದ ಹೆಮ್ಮೆ, ಶಕ್ತಿ ಮತ್ತು ನಿರ್ಣಯದ ಪ್ರತಿಮೆಯಾಗಿದೆ “ಈ ಐತಿಹಾಸಿಕ ದಿನದಂದು, ಭಾರತೀಯ ನೌಕಾಪಡೆ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ನಇಡೀ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ನೌಕಾ ಧ್ವಜವನ್ನು ಅನಾವರಣಗೊಳಿಸಿದರು.ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.p

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button