ಬೆಂಗಳೂರುರಾಜ್ಯ

ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಒತ್ತುವರಿ ತೆರವು ನಿಲ್ಲಿಸುವುದಿಲ್ಲ: ಸತೀಶ್ ರೆಡ್ಡಿ

ಬೆಂಗಳೂರು: ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಹೇಳಿದರು.

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಮಳೆಯಿಂದ ಅನೇಕ‌ ಪ್ರದೇಶಗಳು ಮುಳುಗಡೆ ಆಗಿದೆ.

ಹೀಗಾಗಿ ಒತ್ತುವರಿ ತೆರವು ಕಾರ್ಯ ಶುರುವಾಗಿದೆ. ಅವರು ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಒತ್ತುವರಿ ಕಾರ್ಯ ನಿಲ್ಲಿಸುವುದಿಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸ್ಪಷ್ಟವಾಗಿ ಹೇಳಿದ್ದರು. ಯಾರೇ ಪ್ರಭಾವಿಗಳಿದ್ದರೂ ಕೂಡ ತೆರವುಗೊಳಿಸಬೇಕು.

ಎಷ್ಟೇ ದೊಡ್ಡ ಮನುಷ್ಯರಿದ್ದರೂ ಕೂಡ ತೆರವು ಕಾರ್ಯಕ್ಕೆ ಅಡ್ಡಿ ಬರಬಾರದು. ಎಲ್ಲ ಒತ್ತುವರಿ ತೆರವು ಕೂಡ ಶತಸಿದ್ದ ಎಂದರು.ಬೆಂಗಳೂರಿಗೆ ಪ್ರತ್ಯೇಕ ಉಸ್ತುವಾರಿ ಸಚಿವರು ಇದ್ದರೂ ಕೂಡ ಮಳೆಯನ್ನು ನಿಲ್ಲಿಸಲು ಸಾಧ್ಯವಿಲ್ಲ.

ಸಿಎಂಗೆ ಬೆಂಗಳೂರಿನ ಬಗ್ಗೆ ಪ್ರೀತಿ ಇದೆ. ನಾವೆಲ್ಲ ಒತ್ತಡ ತಂದಾಗ ಅವರು ಬೇಗ ಹಣ ಬಿಡುಗಡೆ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನವರಿಗೆ ಮಾತ್ರ ಬೆಂಗಳೂರಿನ ಬಗ್ಗೆ ಕಾಳಜಿ ಇರುವುದಲ್ಲ. ಮಳೆಯ ಸಂದರ್ಭ ರಾಜಕಾರಣ ಮಾಡುವುದು ಬೇಡ. ನಮ್ಮ ಬೆಂಗಳೂರಿನ ಬಗ್ಗೆ ನಾವೇ ಕೆಟ್ಟದಾಗಿ ಮಾತನಾಡುವುದು ಬೇಡ.

ಬ್ರ್ಯಾಂಡ್ ಬೆಂಗಳೂರಿನ ಹೆಸರನ್ನು ನಾವೇ ಕೆಟ್ಟದಾಗಿ ಮಾತನಾಡಿ ಕೆಡಿಸುವುದು ಬೇಡ.

ಬಿಜೆಪಿ ಎಂಎಲ್ಎಗಳದ್ದು ಮಾತ್ರ ಜವಾಬ್ದಾರಿನಾ? ಕಾಂಗ್ರೆಸ್ ಶಾಸಕರಿಗೆ ಜವಾಬ್ದಾರಿ ಇಲ್ವಾ?’ ಎಂದು ಪ್ರಶ್ನಿಸಿದರು.ಎಲ್ಲ ಕ್ಷೇತ್ರಗಳಲ್ಲೂ ಆಯಾಯ ಶಾಸಕರು ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡಬೇಕು.‌

ಹಿಂದೆ ಕೂಡ ಗೊಂದಲಗಳ ಲಾಭ ಪಡೆದುಕೊಂಡಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ರಾಜಕಾಲುವೆ ಇರುವ ಜಾಗದಲ್ಲಿ ಇರಬೇಕು. ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಬೇಕು ಎಂದರು.

ಭತ್ತ ಬೆಳೆಯುತ್ತಿದ್ದ ಪ್ರದೇಶವದು. ನಾಲ್ಕು ಕೆರೆಗಳ ಮಧ್ಯದಲ್ಲಿನ ನೂರಾರು ಎಕರೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಬೇಸಾಯ ಮಾಡುತ್ತಿದ್ದರು. ಆದರೆ ಆ ಜೌಗು ಪ್ರದೇಶದಲ್ಲಿ ಐಷಾರಾಮಿ ಬಡಾವಣೆಗಳು ತಲೆ ಎತ್ತಿವೆ.

ಹೊರವರ್ತುಲ ರಸ್ತೆಗೆ ಐಟಿ-ಬಿಟಿ ಕಂಪನಿಗಳು ಲಗ್ಗೆ ಇಟ್ಟ ಬೆನ್ನಲ್ಲೇ ಸರ್ಜಾಪುರ ಮುಖ್ಯರಸ್ತೆಯ ರೈನ್‌ ಬೋ ಡ್ರೈವ್‌ ಲೇಔಟ್‌, ಪಕ್ಕದ ದಿ ಕಂಟ್ರಿ ಸೈಡ್‌, ಸನ್ನಿ ಬ್ರೂಕ್ಸ್‌ ಬಡಾವಣೆ, ವಿಪ್ರೊ ಕಂಪನಿ ಹಾಗೂ ಸುತ್ತಮುತ್ತಲ ಬಡಾವಣೆಗಳು ನಿರ್ಮಾಣಗೊಂಡಿವೆ.

ಈ ಎಲ್ಲ ಬಡಾವಣೆಗಳು ಹಾಲನಾಯಕನಹಳ್ಳಿ ಕೆರೆ, ದೊಡ್ಡ ಕನ್ನಹಳ್ಳಿ, ಕೈಕೊಂಡ್ರಹಳ್ಳಿ ಮತ್ತು ಸೌಳ್‌ ಕೆರೆ ಮಧ್ಯ ಭಾಗದಲ್ಲಿವೆ.

ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ನಿರ್ಮಾಣಗೊಂಡಿರುವ ಈ ಬಡಾವಣೆಗಳಲ್ಲಿಯೇ ಮಳೆ ನೀರು ನಿಂತಿದೆ. ರಾಜಕಾಲುವೆಗಳು ಮುಚ್ಚಿ ಹೋಗಿರುವುದರಿಂದ ನೀರು ಹರಿದು ಹೋಗಲು ಜಾಗವೇ ಇಲ್ಲದಂತಾಗಿ ಬೆಂಗಳೂರಿಗರು ಹೈರಣಾಗಿದ್ದಾರೆ.

ಜೌಗು ಭೂಮಿಯ ಮೇಲೆ ಬಡಾವಣೆ ನಿರ್ಮಿಸಿದ ಬಿಲ್ಡರ್ಸ್ ಗಳು ರಾಜಕಾಲುವೆಯನ್ನು ಕಬಳಿಸಿದ್ದಾರೆ. ಕಾಲುವೆಯನ್ನೂ ಸೇರಿಸಿಕೊಂಡು ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಿ ದುಡ್ಡು ಮಾಡಿದ್ದಾರೆ. ಇದನ್ನು ಅರಿಯದ ನಿವಾಸಿಗಳು ಈಗ ಸಂಕಟ ಅನುಭವಿಸುತ್ತಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ರಾಜಕಾಲುವೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಗಮನ ಸೆಳೆದಿದೆ.

ವಾಸ್ತವವಾಗಿ, ಅಕ್ರಮ ಒತ್ತುವರಿಯನ್ನು ಕಂಡ ವಲಯಗಳು ನೀರು ನಿಂತು ಬಳಲುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಅದಕ್ಕೆ ಮಹದೇವಪುರ ಉದಾಹರಣೆ.

ಬೆಂಗಳೂರಿನಲ್ಲಿ ಅಬ್ಬರದ ಮಳೆ ಹಾನಿಗೆ ಕೆರೆಗಳ ಒತ್ತುವರಿ, ಕಾಂಕ್ರೀಟೀಕರಣ, ಅವೈಜ್ಞಾನಿಕ ಭೂ ಬಳಕೆ ಪ್ರಮುಖ ಕಾರಣವಾಗಿದೆ.

ಯಾವ ಪ್ರದೇಶದಲ್ಲಿ ಮುಂಚೆ ಕೆರೆ ಇತ್ತು, ಯಾವ ಪ್ರದೇಶದಲ್ಲಿ ರಾಜಕಾಲುವೆ ಹರಿದು ಹೋಗಿತ್ತು ಎಂಬುದು ಜನರಿಗೆ ಈಗ ಅರಿವಿಗೆ ಬಂದಿದೆ.

ಮಳೆಹಾನಿಯಿಂದ ಅಕ್ರಮ ಲೇಔಟ್‌ ನಿರ್ಮಾಣ, ಕೆರೆ, ರಾಜಕಾಲುವೆ ಒತ್ತುವರಿ, ಅತಿಯಾದ ಕಾಂಕ್ರೀಟಿಕರಣ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು.

ಮನೆ ಕಟ್ಟುವ, ಲೇಔಟ್‌ನಲ್ಲಿ ಸೈಟು ಖರೀದಿಸುವ ಮುನ್ನ ಹಲವು ಬಾರಿ ಯೋಚಿಸಬೇಕು. ಇನ್ನಾದರು ವೈಜ್ಞಾನಿಕ ಭೂಬಳಕೆ, ನೀರು ಇಂಗಲು ಆದ್ಯತೆ ನೀಡಬೇಕು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button