ರಾಜ್ಯ
ಎಲ್ಲರಿಗೂ ಇದು ಅರಮನೆ, ಆದರೆ, ನಮಗೆ ನಮ್ಮ ಮನೆ : ರಾಜಮಾತೆ ಪ್ರಮೋದಾದೇವಿ

ಎಲ್ಲರಿಗೂ ಇದು ಅರಮನೆ. ಆದರೆ, ನಮಗೆ ನಮ್ಮ ಮನೆ. ಹಾಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಮನೆಗೆ ಬಂದಿದ್ದಾರೆ ಎಂಬುದು ಸಂತಸ ತಂದಿದೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿಯವರು ಆಗಮಿಸುತ್ತಿದ್ದಾರೆ ಎಂಬ ವಿಷಯ ತಿಳಿದು ಖುದ್ದಾಗಿ ಅವರಿಗೆ ಪತ್ರ ಬರೆದು ಯೋಗ ಪ್ರದರ್ಶನದ ನಂತರ ನಮ್ಮ ಮನೆಯಲ್ಲಿ ಉಪಹಾರ ಸೇವಿಸುವಂತೆ ಮನವಿ ಮಾಡಿದ್ದೆವು.
ಅದಕ್ಕೆ ಸಮ್ಮತಿಸಿದ್ದ ಪ್ರಧಾನಿಯವರು ಇಂದು ಅರಮನೆಯಲ್ಲಿ ಉಪಹಾರ ಸೇವಿಸಿದರು.
ಅವರಿಗಾಗಿ ಮೈಸೂರಿನ ವಿಶೇಷ ತಿಂಡಿಗಳಾದ ಮೈಸೂರು ಪಾಕ್ ಸೇರಿದಂತೆ ದಕ್ಷಿಣ ಭಾರತದ ಖಾದ್ಯಗಳು ಹಾಗೂ ಅವರು ಬಯಸುವ ಉತ್ತರ ಭಾರತದ ಖಾದ್ಯಗಳನ್ನು ತಯಾರಿಸಲಾಗಿತ್ತು ಎಂದು ವಿವರಿಸಿದರು.