
ಲೈಫ್ ಇನ್ಶೂರೆನ್ಸ್ ಪಾಲಿಸಿ ನಾಮಿನಿ ಪ್ರಯೋಜನಗಳು: ನೀವು ಎಲ್ಐಸಿ ಪಾಲಿಸಿಯನ್ನು ತೆಗೆದುಕೊಳ್ಳುತ್ತಿದ್ದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ. ಪಾಲಿಸಿಯನ್ನು ಖರೀದಿಸುವಾಗ, ನಿಮ್ಮ ಕುಟುಂಬದ ಸದಸ್ಯರನ್ನು ನಾಮಿನಿ ಮಾಡುವುದು ಕಡ್ಡಾಯವಾಗಿದೆ. ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ನೀವು ನಾಮಿನಿ ಮಾಡದಿದ್ದರೆ ದೊಡ್ಡ ನಷ್ಟ ಉಂಟಾಗಬಹುದು.
ವಾಸ್ತವವಾಗಿ, ಪಾಲಿಸಿ ಪಡೆಯುವಾಗ ನಾಮಿನಿ ಮಾಡದಿದ್ದರೆ ಪಾಲಿಸಿದಾರರಿಗೆ ಅಪಘಾತ ಸಂಭವಿಸಿದಾಗ ಅಥವಾ ಅವರು ಮೃತಪಟ್ಟಾಗ ಅವರ ಕುಟುಂಬಸ್ಥರು ಪಾಲಿಸಿಯನ್ನು ಕ್ಲೈಮ್ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ನೀವು ಯಾವುದೇ ಪಾಲಿಸಿಯನ್ನು ತೆಗೆದುಕೊಳ್ಳುವಾಗ ಮರೆಯದೇ ನಿಮ್ಮ ಕುಟುಂಬದ ಸದಸ್ಯರನ್ನು ನಾಮಿನಿ ಮಾಡಿ. ನಿಮಗೆ ಅಗತ್ಯ ಎಂದೆನಿಸಿದರೆ ಒಂದಕ್ಕಿಂತ ಹೆಚ್ಚು ಜನರನ್ನು ನಾಮಿನಿಯಾಗಿ ಆಯ್ಕೆ ಮಾಡಬಹುದು.
ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡುವುದು ಹೇಗೆ?ಸಾಮಾನ್ಯವಾಗಿ ಜನರು ಸಂಗಾತಿಯನ್ನು ನಾಮಿನಿ ಆಗಿ ಮಾಡುತ್ತಾರೆ. ಆದರೆ ನಿಮ್ಮ ಹಣವನ್ನು ಇಬ್ಬರ ನಡುವೆ ಹಂಚಲು ನೀವು ಬಯಸಿದರೆ ಅಂದರೆ ಹೆಂಡತಿ ಮತ್ತು ಮಗು ಅಥವಾ ಹೆಂಡತಿ ಮತ್ತು ಸಹೋದರ ಅಥವಾ ತಾಯಿ-ತಂದೆ ನಡುವೆ ಹಂಚಲು ಬಯಸಿದರೆ ಆ ಸಂದರ್ಭದಲ್ಲಿ, ನೀವು ಒಂದಕ್ಕಿಂತ ಹೆಚ್ಚು ಪಾಲಿಸಿಯನ್ನು ಖರೀದಿಸಬಹುದು ಮತ್ತು ಎರಡು ಪಾಲಿಸಿಗಳಿಗೆ ಪ್ರತ್ಯೇಕ ನಾಮಿನಿಗಳನ್ನು ರಚಿಸಬಹುದು. ಇಲ್ಲವೇ ನೀವು ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ಪಾಲನ್ನು ನಿರ್ಧರಿಸಿ ಅವರನ್ನು ನಾಮಿನಿಯನ್ನಾಗಿ ಮಾಡಬಹುದು. ವಿಮಾದಾರರಿಂದ ಪಾಲಿಸಿಯನ್ನು ಖರೀದಿಸುವಾಗ ಈ ಲಿಖಿತ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬಹುದು.
ನಾಮಿನಿಯನ್ನು ಆಯ್ಕೆಮಾಡುವಾಗ ಈ ವಿಷಯಗಳು ನೆನಪಿರಲಿ:ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ನಾಮಿನಿಯ ಹೆಸರನ್ನು ನಿರ್ಧರಿಸಿ. ಆದರೆ ಪಾಲಿಸಿಗೆ ಸರಿಯಾದ ನಾಮಿನಿಯನ್ನು ಆಯ್ಕೆ ಮಾಡುವುದು ಕೂಡ ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಕುಟುಂಬದಲ್ಲಿ ನೀವು ಮಾತ್ರ ಗಳಿಸುವ ಸದಸ್ಯರಾಗಿದ್ದರೆ, ನಿಮ್ಮ ಅನುಪಸ್ಥಿತಿಯಲ್ಲಿ ಹಣಕಾಸಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಕುಟುಂಬದ ವ್ಯಕ್ತಿಯನ್ನು ನಾಮಿನಿಗಾಗಿ ಆಯ್ಕೆ ಮಾಡಿ.
ನಾಮಿನಿಗಳು ಕಾಲಕ್ಕೆ ತಕ್ಕಂತೆ ಬದಲಾಗಬಹು:ಕೆಲವು ಸಂದರ್ಭಗಳಲ್ಲಿ ಕಾಲಕ್ಕೆ ತಕ್ಕಂತೆ ಪಾಲಿಸಿದಾರರು ತಮ್ಮ ನಾಮಿನಿಯನ್ನು ಸಹ ಬದಲಾಯಿಸಬಹುದು. ಒಂದೊಮ್ಮೆ ನಿಮ್ಮ ನಾಮಿನಿ ಮರಣ ಹೊಂದಿದರೆ ಅಥವಾ ನೀವು ನಿಮ್ಮ ಕುಟುಂಬದ ಬೇರೆ ವ್ಯಕ್ತಿಯನ್ನು ನಾಮಿನಿಯಾಗಿ ಆಯ್ಕೆ ಮಾಡಲು ಬಯಸಿದರೆ ನಾಮಿನಿಯನ್ನು ಬದಲಾಯಿಸಬಹುದು. ಇದಲ್ಲದೆ, ಮದುವೆ ಅಥವಾ ವಿಚ್ಛೇದನದ ಸಂದರ್ಭದಲ್ಲಿ ನಾಮಿನಿಯನ್ನು ಬದಲಾಯಿಸಬಹುದು.
ನಾಮಿನಿಯನ್ನು ಬದಲಾಯಿಸಲು ಇಚ್ಚಿಸುವ ಪಾಲಿಸಿದಾರರು, ಇದಕ್ಕಾಗಿ ವಿಮಾ ಕಂಪನಿಯ ವೆಬ್‌ಸೈಟ್‌ನಿಂದ ನಾಮಿನಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಅಥವಾ ಕಚೇರಿಯಿಂದ ಈ ಫಾರ್ಮ್ ಅನ್ನು ಸಂಗ್ರಹಿಸಿ. ಫಾರ್ಮ್‌ನಲ್ಲಿ ನಾಮಿನಿಯ ವಿವರಗಳನ್ನು ಭರ್ತಿ ಮಾಡಿ. ಬಳಿಕ ಪಾಲಿಸಿ ಡಾಕ್ಯುಮೆಂಟ್‌ನ ಪ್ರತಿಯನ್ನು ಮತ್ತು ನಾಮಿನಿಯೊಂದಿಗೆ ನಿಮ್ಮ ಸಂಬಂಧದ ದಾಖಲೆಗಳನ್ನು ಸಲ್ಲಿಸಿ. ಒಂದಕ್ಕಿಂತ ಹೆಚ್ಚು ನಾಮಿನಿಗಳಿದ್ದರೆ, ಪ್ರತಿಯೊಬ್ಬರ ಪಾಲನ್ನು ಸಹ ನಿರ್ಧರಿಸಿ.