ಅಪಘಾತ

ಎಲ್‌ಇಡಿ ಟಿವಿ ಸ್ಫೋಟ : ಬಾಲಕ ಸಾವು

ಮನೆಯೊಂದರಲ್ಲಿ ಎಲ್‌ಇಡಿ ಟಿವಿ ಸ್ಫೋಟಗೊಂಡು ೧೬ ವರ್ಷದ ಬಾಲಕ ಸಾವನ್ನಪ್ಪಿ, ಆತನ ತಾಯಿ, ಅತ್ತಿಗೆ ಮತ್ತು ಸ್ನೇಹಿತ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಇನ್ನು ಈ ಸ್ಫೋಟಕಕ್ಕೆ ಮನೆಯ ಗೋಡೆಯ ಒಂದು ಭಾಗ ಕೂಡ ಕುಸಿದು ಬಿದ್ದಿದೆ. ಘಟನೆಯಲ್ಲಿ ಓಮೇಂದ್ರ (೧೬) ಮೃತ ಬಾಲಕ. ಈತ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತ್ತಿದ್ದ. ಆ ವೇಳೆ ಎಲ್‌ಇಡಿ ಟಿವಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಓಮೇಂದ್ರ ನ ಮುಖ, ಎದೆ ಮತ್ತು ಕತ್ತಿನ ಮೇಲೆ ತೀವ್ರವಾಗಿ ಗಾಯವಾಗಿದೆ.

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿದೇ ಸಾವನ್ನಪ್ಪಿದ್ದಾನೆ.ಸಾವಿಗೀಡಾದ ಓಮೇಂದ್ರ ಅವರ ತಾಯಿ, ಸೊಸೆ ಮತ್ತು ಸ್ನೇಹಿತ ಕರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಗಾಜಿಯಾಬಾದ್ ಪೊಲೀಸ್ ಅಧಿಕಾರಿ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ.

ಈ ಸ್ಫೋಟ ಎಷ್ಟು ತೀವ್ರವಾಗಿತ್ತು ಎಂದರೆ ಮನೆಯ ಕಾಂಕ್ರೀಟ್ ಸ್ಲ್ಯಾಬ್ ಹಾಗೂ ಗೋಡೆಯ ಒಂದು ಭಾಗ ಸ್ಫೋಟದ ರಭಸಕ್ಕೆ ಕುಸಿದು ಹೋಗಿದೆ.ಈ ಸಂಬಂಧ ಮಾತನಾಡಿದ ಪಕ್ಷದ ಮನೆಯವರಾದ ವಿನಿತಾ ಅವರು ತನಗೆ ದೊಡ್ಡ ಶಬ್ದ ಕೇಳಿಸಿತು. ಸಿಲಿಂಡರ್ ಸ್ಫೋಟಗೊಂಡಿದೆ ಎಂದು ನಾನು ಭಾವಿಸಿದ್ದೇವು.

ಆದರೆ ಎಲ್‌ಇಡಿ ಟಿ ಸ್ಪೋಟಗೊಂಡು ಪಕ್ಕದ ಗೋಡೆಸಹ ಕುಸಿದಿದೆ ಎಂದರು.ಸ್ಪೋಟ ತುಂಬಾ ಶಕ್ತಿಯುತವಾಗಿತ್ತು, ಸ್ಪೋಟಗೊಂಡ ವೇಳೆ ಇಡೀ ಮನೆಯೇ ನಡುಗಿತ್ತು, ಅಲ್ಲದೆ ಮನೆಯ ಗೋಡೆಯ ಒಂದು ಭಾಗವು ಕುಸಿದಿದೆ ಎಂದು ಮನೆಮಂದಿ ಹೇಳಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button