ರಾಜ್ಯ

ಎಲಾನ್ ಮಸ್ಕ್ ಅಬ್ಬರ: ಟ್ವಿಟ್ಟರ್ ‘ಬ್ಲೂ ಟಿಕ್‌’ ಪಡೆಯಲು ಹೊಸ ಬೆಲೆ ಘೋಷಣೆ!

ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್‌ ಟ್ವಿಟ್ಟರ್ ಸಂಸ್ಥೆಯ ಹೊಸ ಮಾಲಿಕ ಎಲಾನ್ ಮಸ್ಕ್ ಅವರು ಬ್ಲೂ ಟಿಕ್‌ಗಾಗಿ ತಿಂಗಳಿಗೆ 8 (ಅಂದಾಜು 661 ರೂ.) ಪಾವತಿಸಬೇಕಾಗುತ್ತದೆ ಎಂದು ಮಂಗಳವಾರ ಘೋಷಿಸಿದ್ದಾರೆ. ಟ್ವಿಟರ್‌ನ ಪ್ರಸ್ತುತ ಬ್ಲೂ ಟಿಕ್‌ ವ್ಯವಸ್ಥೆಯು ಬ್ಲೂ ಟಿಕ್ ಹೊಂದಿರುವವರಿಗೆ ಮತ್ತು ಹೊಂದಿಲ್ಲದವರಿಗೂ ಉತ್ತಮವಾಗಿಲ್ಲ.

ಇದೀಗ ಜನರಿಗೆ ಅಧಿಕಾರ ನೀಡಲಾಗಿದೆ. ಈಗ ಪ್ರತಿ ತಿಂಗಳು 8 ಡಾಲರ್ ಪಾವತಿಸಿ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯನ್ನು ಪಡೆದುಕೊಳ್ಳಿ ಎಂದು ಎಲಾನ್ ಮಸ್ಕ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇಷ್ಟೇ ಅಲ್ಲದೇ, ಖರೀದಿ ಸಾಮರ್ಥ್ಯದ ಅನುಗುಣವಾಗಿ ಆಯಾ ದೇಶದಲ್ಲಿ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯ ಬೆಲೆಯನ್ನು ಸರಿಹೊಂದಿಸಲಾಗುತ್ತದೆ ಎಂದು ಮಸ್ಕ್ ಅವರು ಹೇಳಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ “ಇದೀಗ ಸಂಪೂರ್ಣ ಪರೀಶಿಲನೆ ಪ್ರಕ್ರಿಯೆಯನ್ನು ಪರಿಷ್ಕರಿಸಲಾಗುತ್ತದೆ” (The whole verification process is being revamped right now) ಎಂದು ಟ್ವೀಟ್ ಮಾಡುವ ಮೂಲಕ ಎಲಾನ್ ಮಸ್ಕ್ ಅವರೇ ಬ್ಲೂ ಟಿಕ್ ಪರಿಷ್ಕರಣೆಯ ಸುದ್ದಿಯನ್ನು ಖಚಿತಪಡಿಸಿದ್ದರು.

ಟ್ವಿಟ್ಟರ್ ಸಂಸ್ಥೆಯು ಹೊಸ ಟ್ವಿಟರ್ ಬ್ಲೂ ಚಂದಾದಾರಿಕೆಗಾಗಿ $19.99 (ಅಂದಾಜು ₹1,600) ರಷ್ಟು ಶುಲ್ಕ ವಿಧಿಸಲು ಯೋಜಿಸಿಸುತ್ತಿದೆ ಎಂದು ನೆನ್ನೆಯಷ್ಟೇ ವರದಿಯಾಗಿತ್ತು. ಇದೀಗ ಈ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು, ಪ್ರತಿ ತಿಂಗಳು 8 ಡಾಲರ್ ಪಾವತಿಸಿ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು.

ಭಾರತದಲ್ಲಿ ಈ ಮೊತ್ತ ಕಡಿಮೆ ಇರಬಹುದು ಎಂದು ಊಹಿಸಬಹುದಾದರೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಟ್ವಿಟ್ಟರ್ ಬ್ಲೂ ಚಂದಾದಾರಿಕೆಯು ಪರಿಶೀಲಿಸಿದ ಬ್ಯಾಡ್ಜ್, ಟ್ವೀಟ್‌ಗಳನ್ನು ಎಡಿಟ್ ಮಾಡುವ ಸಾಮರ್ಥ್ಯ, ಟ್ವೀಟ್‌ಗಳನ್ನು ರದ್ದು ಮಾಡುವ ಹಲವು ಪ್ರಮುಖ ಅಥವಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.

ಇದೀಗ ಎಲಾನ್ ಮಸ್ಕ್ ಅವರು, ಟ್ವೀಟ್‌ಗಳ ಅಕ್ಷರ ಮಿತಿಯನ್ನು ಹೆಚ್ಚಿಸುವ ನಿರ್ಧಾರದಂತಹ ಹಲವು ಬದಲಾವಣೆಗಳನ್ನು ತರಲು ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ. ಕಳೆದ ಗುರುವಾರದಂದು ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸಿದ ನಂತರ ಹಲವು ಮಹತ್ತರ ಬೆಳವಣಿಗೆಗಳಾಗುತ್ತಿವೆ.

ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ವಾರದ ಒಳಗಾಗಿ ಉನ್ನತ ಮಟ್ಟದಲ್ಲಿದ್ದ ಉದ್ಯೋಗಿಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರನ್ನು ವಜಾಗೊಳಿಸಿ ಆದೇಶಿಸಿದ್ದರು.ಕಳೆದ ಏಪ್ರಿಲ್‌ನಲ್ಲಿ 4 ಬಿಲಿಯನ್ ಡಾಲರ್ (ಸುಮಾರು ರೂ. 3,62,100 ಕೋಟಿ) ಮೌಲ್ಯಕ್ಕೆ ಟ್ವಿಟ್ಟರ್ ಖರೀದಿಸುವ ಒಪ್ಪಂದಕ್ಕೆ ಎಲಾನ್ ಮಸ್ಕ್ ಅವರು ಸಹಿ ಹಾಕಿದ್ದರು.

ಇದಾದ ನಂತರ ಟ್ವಿಟ್ಟರ್ ಖರೀದಿ ಪ್ರಕ್ರಿಯೆಯು ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ಟ್ವಿಟ್ಟರ್‌ನಲ್ಲಿ ನಕಲಿ ಖಾತೆಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ, ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಟ್ವಿಟರ್‌ನ ಉನ್ನತ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಮಸ್ಕ್ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

ಇದರಿಂದ ಆಘಾತಗೊಂಡ ಟ್ವಿಟ್ಟರ್ ಮಂಡಳಿಯು ಎಲಾನ್ ಮಸ್ಕ್ ಅವರ ವಿರುದ್ಧ ಟ್ವಿಟ್ಟರ್‌ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿ, ಒಪ್ಪಂದದಿಂದ ನಿರ್ಗಮಿಸಲು ಎಲಾನ್ ಮಸ್ಕ್ ಅವರು ಬಾಟ್‌ಗಳನ್ನು ನೆಪವಾಗಿ ಬಳಸಿದ್ದಾರೆ ಎಂದು ವಾದಿಸಿತ್ತು.ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಅಕ್ಟೋಬರ್ 28 ರ ಒಳಾಗಿ ವಹಿವಾಟು ಅಂತಿಮ ಘಟ್ಟಕ್ಕೆ ಬರಬೇಕು ಎಂದಿದ್ದರು.

ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಮಸ್ಕ್ ಅವರಿಗೆ ಕೇವಲ ಒಂದು ದಿನದ ಅವಕಾಶವಿರುವ ಕಳೆದ ಗುರುವಾರದಂದು ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿದ್ದರು. ಸ್ವಾಧೀನದ ಒಪ್ಪಂದ ಮುಕ್ತಾಯಗೊಳಿಸುವ ಮೊದಲೇ ಅವರು ತಮ್ಮ ಟ್ವಿಟ್ಟರ್‌ ಬಯೋದಲ್ಲಿ ‘ಚೀಫ್ ಟ್ವಿಟ್’ ಎಂದು ಬದಲಾಯಿಸಿಕೊಂಡಿದ್ದರು.

ಇಷ್ಟೇ ಅಲ್ಲದೆ, ಟ್ವಿಟ್ಟರ್ ಮುಖ್ಯ ಕಚೇರಿಗೆ ಹೋಗುತ್ತಿದ್ದೇನೆ. ಅದು ಮುಳುಗಲು ಬಿಡಿ (‘“Entering Twitter HQ – let that sink in!”) ಎಂದು ಶೀರ್ಷಿಕೆಯ ಕೈ ತೊಳೆಯುವ ವಾಷ್ ಬೇಸಿನ್ ಹೊತ್ತು ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿ ಆಶ್ಚರ್ಯ ಮೂಡಿಸಿದ್ದರು. ಇದೀಗ ಈ ಆಶ್ಚರ್ಯವು ಇಲ್ಲಿಗೆ ಮುಗಿಯುವಂತೆ ಕಾಣುತ್ತಿಲ್ಲ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button