ಎಡಿಜಿಪಿ ಅಮೃತ್ ಪೌಲ್ ಬಂಧನ

ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿದೆ.
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಅಮೃತ್ ಪೌಲ್ ಅವರನ್ನು ಸಿಐಡಿ ವಿಚಾರಣೆಗೆ ಕರೆದಿತ್ತು.
ಪಿಎಸ್‍ಐ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪೌಲ್ ಅವರ ಆಫೀಸಿನಲ್ಲೇ OMR ಶೀಟ್ ತಿದ್ದುವ ಕೆಲಸ ಮಾಡಿದ್ದರಂತೆ. ಈ ಸಂಬಂಧ 4ನೇ ಬಾರಿಗೆ ಅಮೃತ್ ಪೌಲ್ ವಿಚಾರಣೆಗೆ ಹಾಜರಾಗಿದ್ದರು.
ಈ ವೇಳೆ ಅವರನ್ನು ಬಂಧಿಸಿದ ಸಿಐಡಿ ಅಧಿಕಾರಿಗಳು ಕೋರ್ಟ್‍ಗೆ ಕರೆದೊಯ್ದಿದ್ದಾರೆ. ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಸೇರಿದ 20ಕ್ಕಿಂತ ಹೆಚ್ಚು ಆರೋಪಿಗಳನ್ನು ಬೆಂಗಳೂರು ವಿಭಾಗದ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಐಎಸ್‍ಡಿಗೆ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು.
ನೇಮಕಾತಿ ಹಗರಣದಲ್ಲಿ ಆಭ್ಯರ್ಥಿಗಳಿಂದ ಡೀಲ್ ಮಾಡಿಕೊಂಡಿರುವ ಬಗ್ಗೆ ಎಡಿಜಿಪಿ ಮೇಲೆ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆ ಸಿಐಡಿ ತನಿಖಾಧಿಕಾರಿಗಳು ಜಾರಿಗೊಳಿಸಿದ್ದ ನೊಟೀಸ್‍ಗೆ ಅಮ್ರಿತ್ ಪೌಲ್ 3 ಬಾರಿ ವಿಚಾರಣೆ ಹಾಜರಾಗಿದ್ದರು.
ಸೋಮವಾರ(ಜುಲೈ 4) ಸಹ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆ ವೇಳೆ ಪೌಲ್ ಎಸಗಿದ್ದ ಅವ್ಯವಹಾರದ ಬಗ್ಗೆ ಸಾಕ್ಷ್ಯ ಲಭ್ಯ ಹಿನ್ನೆಲೆ ಸಿಐಡಿ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.
ಇಂದು ಸಂಜೆಯೊಳಗೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ.ಡಿವೈಎಸ್‍ಪಿ , ಎಫ್‍ಡಿಯೊಂದಿಗೆ ಸೇರಿ ಅಮೃತ್ ಪೌಲ್ ಡೀಲ್ ಮಾಡಿದ್ದರು.
ಬಂಧನಕ್ಕೆ ಒಳಗಾದ ಆರೋಪಿಗಳು ವಿಚಾರಣೆ ವೇಳೆ ಪೌಲ್ ಹೆಸರು ಹೇಳಿದ್ದರು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಟಾಪ್ ಮೋಸ್ಟ್ ಅಧಿಕಾರಿಯ ಬಂಧನವಾಗಿದೆ.
ಈವರೆಗೆ ಇನ್ಸ್‌ಪೆಕ್ಟರ್, ಸಿಬ್ಬಂದಿ, ಡಿವೈಎಸ್‍ಪಿ ಹಂತದ ಅಧಿಕಾರಿಗಳ ಬಂಧನವಾಗಿತ್ತು. ಇದೀಗ ಇದೇ ಮೊದಲ ಬಾರಿಗೆ ಎಡಿಜಿಪಿ ಹಂತದ ಅಧಿಕಾರಿಯ ಬಂಧನವಾದಂತಾಗಿದೆ.
ಇತ್ತೀಚಿಗೆ ಸಿಐಡಿ ತನಿಖೆ ಬಗ್ಗೆ ಗರಂ ಹೈಕೋರ್ಟ್ ಗರಂ ಆಗಿತ್ತು. ಹೈಕೋರ್ಟ್ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪಿಎಸ್‍ಐ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿತ್ತು.
ಬೌರಿಂಗ್ ಅಸ್ಪತ್ರೆಯಲ್ಲಿ ಅಮೃತ್ ಪೌಲ್ ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಬಳಿಕ ಅವರನ್ನು ಕೋರ್ಟ್‍ಗೆ ಕರೆದುಕೊಂಡು ಬರಲಾಗುವುದು.
ಕೋರ್ಟ್‍ಗೆ ಹಾಜರುಪಡಿಸಿದ ಬಳಿಕ ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆಯಲಿದ್ದಾರೆ.