ಎಎಪಿ ಪಕ್ಷ ಸೇರಿದ ʼಅಧ್ಯಕ್ಷʼ ಸಿನಿಮಾ ಖ್ಯಾತಿಯ ನಟಿ ಆರೋಹಿತ

ಬೆಂಗಳೂರು : ನಟ ಶರಣ್ ಅಭಿನಯದ ಅಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಜೊತೆಯಾಗಿ ನಟಿಸಿದ್ದ ನಟಿ ಆರೋಹಿತ ಗೌಡ ಆಮ್ ಆದ್ಮಿ ಪಕ್ಷಕ್ಕೆ ಇಂದು ಸೇರ್ಪಡೆಗೊಂಡರು.
ಆಪ್ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಆರೋಹಿತ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.ದೇಶ ಮತ್ತು ರಾಜ್ಯದಲ್ಲಿ ಯುವಜನತೆ ಬದಲಾವಣೆ ಬಯಸುತ್ತಿದೆ. ದೆಹಲಿಯಲ್ಲಿ ಎಎಪಿ ಪಕ್ಷದ ಆಡಳಿತವನ್ನು ನೋಡಿದ್ದೇನೆ. ಅಲ್ಲಿನ ಶಾಲೆಗಳಲ್ಲಿ ಅದ್ಭುತ ಬದಲಾವಣೆಗಳಾಗಿವೆ. ಸ್ವಚ್ಛ ಹಾಗೂ ಗುಣಮಟ್ಟದ ಆಡಳಿತದಿಂದ ಮಾತ್ರ ಇದು ಸಾಧ್ಯ.
ಆದ್ದರಿಂದ ಕರ್ನಾಟಕದಲ್ಲಿಯೂ ಇಂತಹ ಆಡಳಿತ ಬರಬೇಕು ಎಂಬ ಉದ್ದೇಶದಿಂದ ಎಎಪಿ ಸೇರಿದ್ದೇನೆ ಎಂದು ಆರೋಹಿತ ಹೇಳಿದ್ದಾರೆ.ಬಿ.ಕಾಂ ಪದವೀಧರೆಯಾಗಿರುವ ಆರೋಹಿತ ನಟನೆ ಅಲ್ಲದೆ ಅವರೊಬ್ಬ ಉತ್ತಮ ಕರಾಟೆ ಪಟು.
ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿರುವ ಆರೋಹಿತಾಗೆ ʼಅಧ್ಯಕ್ಷʼ ಸಿನಿಮಾ ಸ್ಟಾರ್ಟ್ ಅಪ್ ನೀಡಿತ್ತು. ಇತ್ತೀಚೆಗೆ ನಟ ಟೆನ್ನಿಸ್ ಕೃಷ್ಣ ಅವರು ಮಾಜಿ ಐಪಿಎಸ್ ಅಧಿಕಾರಿ, ಬೆಂಗಳೂರು ಕಮೀನರ್ ಭಾಸ್ಕರ್ ರಾವ್ ನೇತೃತ್ವದಲ್ಲಿ ಎಎಪಿಗೆ ಸೇರ್ಪಡೆಯಾಗಿದ್ದರು.