
ಆದಾಯ ತೆರಿಗೆ ಅಧಿಕಾರಿಗಳು ಇಂದು ಎಂಬೆಸಿ ಗ್ರೂಪ್‍ನ ಹಲವು ಆಧಿಕಾರಿಗಳು, ಉದ್ಯಮಿಗಳ ಫ್ಲಾಟ್ ಮೇಲೆ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಬೆಂಗಳೂರು, ಮುಂಬೈ ಮತ್ತು ಗೋವಾದ 60ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಗೋವಾ- ಕರ್ನಾಟಕ ಅಧಿಕಾರಿಗಳ ತಂಡದಿಂದ ಸುಮಾರು 600ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲೇ ಏಕಕಾಲದಲ್ಲಿ 30ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಶೋಧ ನಡೆಸಲಾಗಿದ್ದು, ಆದಾಯ ಮರೆಮಾಚಿ ಐಟಿ ರೆಟನ್ಸ್ ಸಲ್ಲಿಕೆ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ.
ಐಟಿ ರೆಟನ್ಸ್ ಸಲ್ಲಿಕೆಗಿಂತ ಹೆಚ್ಚಿನ ಆದಾಯ ಹೊಂದಿರುವುದನ್ನು ಪತ್ತೆ ಹಚ್ಚಲಾಗಿದೆ. ಬೆಂಗಳೂರಿನ ಹಲವೆಡೆ ಇರುವ ಎಂಬೆಸ್ಸಿ ಐಷಾರಾಮಿ ಫ್ಲಾಟ್‍ಗಳಲ್ಲಿ ತಪಾಸಣೆ ಮುಂದುವರೆದಿದೆ.