ಎಂಜಿನಿಯರಿಂಗ್ ಕನಸು ಕಂಡಿದ್ದ ವಿದ್ಯಾರ್ಥಿಗಳಿಗೆ ಆಘಾತ

ದ್ವಿತೀಯ ಪಿಯುಸಿ ಪಾಸಾಗಿ ಎಂಜಿನಿಯರಿಂಗ್ ಸೇರಬಯಸಿದ್ದ ನೂರಾರು ವಿದ್ಯಾರ್ಥಿಗಳಿಗೆ ಆಘಾತ ಎದುರಾಗಿದೆ. ಎಂಜಿನಿಯರ್ ಕೋರ್ಸ್ ಸೇರಲು ಕನಸು ಕಂಡಿದ್ದ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗೆ ಹಾಲ್ ಟಿಕೆಟ್ ಸಿಗದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಪ್ರತಿ ವರ್ಷ ಸಿಇಟಿ ಪರೀಕ್ಷೆ ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ರೀತಿ ತೊಂದರೆ ಮಾಡುತ್ತಲೇ ಇದೆ.ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿ ಮಾಡಿದ್ರು ಹಾಲ್ ಟಿಕೆಟ್ ಡೌನ್ ಲೋಡ್ ಆಗ್ತಿಲ್ಲ ಹೀಗಾಗಿ ನಾವು ಪರೀಕ್ಷೆ ಬರೆಯಲು ಸಾಧ್ಯವಾಗುವುದೋ ಇಲ್ಲವೊ ಎಂಬ ಆತಂಕದಲ್ಲಿದ್ದಾರೆ ನೂರಾರು ವಿದ್ಯಾರ್ಥಿಗಳು.
ಸಿಇಟಿ ಪರೀಕ್ಷೆಗೆ ಇನ್ನೂ ಕೇವಲ 9 ದಿನ ಮಾತ್ರ ಬಾಕಿ ಉಳಿದಿದೆ ಆದರೂ ಹಾಲ್ ಟಿಕೆಟ್ ಡೌನ್‍ಲೋಡ್ ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.ಸಿಇಟಿ ಪರೀಕ್ಷೆ ತೆಗೆದುಕೊಂಡ ನಮ್ಮ ಮಕ್ಕಳಿಗೆ ಹಾಲ್ ಟಿಕೆಟ್ ದೊರೆಯದಿರುವುದರಿಂದ ಆತಂಕ ಎದುರಾಗಿದೆ ಎಂದು ಪೋಷಕರು ಕಣ್ಣಿರು ಹಾಕುತ್ತಿದ್ದಾರೆ. ಕೂಡಲೆ ಪರೀಕ್ಷಾ ಪ್ರಾಕಾರದವರು ಆಗಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಿಇಟಿ ವೆಬ್ ಸೈಟ್ ಸರ್ವರ್ ಸ್ಲೋ ಅಂತ ತೋರಿಸುತ್ತಿರುವುದರಿಂದ ಬೆಳಿಗ್ಗೆಯಿಂದ ಸಾವಿರಾರು ವಿದ್ಯಾರ್ಥಿಗಳು ಕೆಇಎಗೆ ಹಾಲ್ ಟಿಕೆಟ್ ಸಮಸ್ಯೆ ಕುರಿತು ದೂರು ನೀಡುತ್ತಿದ್ದಾರೆ.ಆದ್ರೆ ಕೆಇಎ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ.
ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಟ್ಯೂಷನ್ ಗೆ ಕಳುಹಿಸಿದ್ದೇವೆ ನಮ್ಮ ಮಕ್ಕಳಿಗೆ ಅನ್ಯಾಯವಾಗಲು ಬಿಡಬೇಡಿ ಎಂದು ಪೋಷಕರು ಮನವಿ ಮಾಡಿಕೊಂಡಿದ್ದಾರೆ.ಸಿಇಟಿ ಹಾಲ್ ಟಿಕೆಟ್ ಸಂಬಂಧ ತಾಂತ್ರಿಕ ತೊಂದರೆಯಾಗಿದೆಯಾರು ಪರೀಕ್ಷೆಗೆ ನೋಂದಾಯಿಸಿದ್ದಾರೋ ಅವರಿಗೆ ಮತ್ತೊಂದು ದಿನ ದಾಖಲಾತಿ ಅಪ್ ಲೋಡ್ ಮಾಡಲು ಅವಕಾಶ ನೀಡಲು ಚಿಂತಿಸಲಾಗುತ್ತಿದೆ.
ಅದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಕೆಇಎ ನಿರ್ದೇಶಕಿ ರಮ್ಯ ತಿಳಿಸಿದ್ದಾರೆ.