ಅಪರಾಧ
ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಗಳು ಅರೆಸ್ಟ್..!

NCIB ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಗಳನ್ನ ಬಂಧಿಸಲಾಗಿದೆ.
ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ರಘು ಮತ್ತು ಸಾಯಿ ಕಿರಣ್ ಎಂಬ ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರೈವೇಟ್ ಏಜೆನ್ಸಿ ಆಲ್ಕನ್ ಲ್ಯಾಬೋರಿಟೋರಿಸ್ ಇಂಡಿಯಾ ಕಂಪನಿ ಪ್ರೈವೇಟ್ ಲಿಮಿಡೆಟ್ ಹೆಸರಲ್ಲಿ ಆರೋಪಿಗಳು ವಂಚಿಸಿದ್ದು, ನಕಲಿ ಇಮೇಲ್ ಐಡಿ ನಲ್ಲಿ ಫೇಕ್ ಕಂಪನಿ ಲೋಗೋ ಬಳಸಿ ವಂಚನೆ ಮಾಡಿದ್ದಾರೆ.
ಕೆಲಸ ಕೊಡಿಸುವುದಾಗಿ ಉದ್ಯೋಗಾಂಕ್ಷಿಗಳ ಬಳಿ ಆರೋಪಿಗಳು ಹಣ ಪಡೆಯುತ್ತಿದ್ದರು. ಬಂಧಿತರಿಂದ ಹನ್ನೊಂದು ಮೊಬೈಲ್ ,ಎರಡು ಸಿಪಿಯು ಒಂದು ಲ್ಯಾಪ್ ಟಾಪ್ ಸೇರಿ 43 ಸಾವಿರ ಹಣ ಜಪ್ತಿ ಮಾಡಲಾಗಿದ್ದು, ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.