ಪೊಲೀಸ್
ಉಡುಪಿ: ಸುಟ್ಟುಹೋದ ಕಾರಿನಲ್ಲಿ ಬೆಂಗಳೂರಿನ ಇಬ್ಬರ ಶವ ಪತ್ತೆ.

ಬ್ರಹ್ಮಾವರ (ಉಡುಪಿ ಜಿಲ್ಲೆ): ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಸುಟ್ಟು ಕರಕಲಾಗಿರುವ ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ.ಪಜಾವಾಣಿಬೆಂಗಳೂರು ಆರ್.ಟಿ.ನಗರದ ಯಶವಂತ ಯಾದವ್, ಜ್ಯೋತಿ ಮೃತರು ಎಂದು ತಿಳಿದುಬಂದಿದೆ.
ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಯಶವಂತ ಯಾದವ್ ಹಾಗೂ ಜ್ಯೋತಿ ನಾಪತ್ತೆ ಕೇಸು ದಾಖಲಾಗಿತ್ತು.ಮೃತರು ಈಚೆಗೆ ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಕಾರು ಬಾಡಿಗೆ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಾರು ಬೆಂಕಿಗಾಹುತಿಯಾಗಿದ್ದನ್ನು ಕಂಡು ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಇಬ್ಬರ ಶವ ಪತ್ತೆಯಾಗಿದೆ.ಬ್ರಹ್ಮಾವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.