ಈ ಹಲ್ಲಿಯ ಬೆಲೆ ಕೇಳಿ ನೀವೂ ದಂಗಾಗುವಿರಿ, ಒಂದು ಹಲ್ಲಿಯ ಬೆಲೆಯಲ್ಲಿ ಬಿಎಂಡಬ್ಲ್ಯೂ ಕಾರ್ ಖರೀದಿಸಬಹುದಂತೆ

ಹಲ್ಲಿ ಪ್ರತಿಯೊಂದು ಮನೆಯಲ್ಲಿ ಕಂಡುಬರುವ ಒಂದು ಸಾಮಾನ್ಯ ಜೀವವಾಗಿದೆ. ಅಷ್ಟೇ ಯಾಕೆ ಮನೆಯ ಹಲವು ಸದಸ್ಯರು ಹಲ್ಲಿ ನೋಡಿ ಹೆದರುತ್ತಾರೆ.
ಆದರೆ, ಇದೇ ಹಲ್ಲಿ ನಿಮ್ಮನ್ನು ಕೋಟ್ಯಾಧೀಶರನ್ನಾಗಿಸಬಹುದು ಎಂದು ನೀವೆಂದಾದರೂ ಯೋಚಿಸಿದ್ದೀರಾ? ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಇಂದು ನಾವು ನಿಮಗೆ ಮಾಹಿತಿ ನೀಡಲು ಹೊರಟಿರುವ ಹಲ್ಲಿಯೊಂದರ ಬೆಲೆಯಲ್ಲಿ ನೀವು ಒಂದು ಬಿಎಂಡಬ್ಲ್ಯೂ ಕಾರನ್ನು ಖರೀದಿಸಬಹುದು.
ಏಕೆಂದರೆ ಇದೊಂದು ತೀರಾ ವಿರಳವಾಗಿ ಕಂಡು ಬರುವ ಒಂದು ಅಪರೂಪದ ಹಲ್ಲಿಯಾಗಿದೆ. ಹೌದು, ನಾವು ಹೇಳುತ್ತಿರುವುದು ಗಿಕ್ಕೋ ಹೆಸರಿನ ಅಪರೂಪದ ಹಲ್ಲಿಯ ಬಗ್ಗೆ,ಲ್ಭಾರತದಲ್ಲಿ ಈ ಹಲ್ಲಿಯ ಖರೀದಿ ಹಾಗೂ ಮಾರಾಟ ಕಾನೂನುಬಾಹಿರವಾಗಿದೆ ಈ ಹಲ್ಲಿ ದುಬಾರಿ ಬೆಲೆಗೆ ಮಾರಾಟವಾಗುವುದರ ಹಿಂದೆ ಒಂದು ಕಾರಣವಿದೆ.
ಅದೇನೆಂದರೆ, ಇಡೀ ವಿಶ್ವದಲ್ಲಿ ಕೇವಲ ಭಾರತದ ಬಿಹಾರ್ ಮತ್ತು ಬಿಹಾರ್ ಗೆ ಹೊಂದಿಕೊಂಡಂತೆ ಇರುವ ನೇಪಾಳದಲ್ಲಿ ಮಾತ್ರ ಈ ಹಲ್ಲಿ ಕಂಡುಬರುತ್ತದೆ. ಇವುಗಳ ಸಂತತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
ಇದೇ ಕಾರಣದಿಂದ ಇವುಗಳನ್ನು Wildlife Protection Act, 1972ನ ಶೆಡ್ಯೂಲ್ 3ರ ಅಡಿ ಲಿಸ್ಟ್ ಮಾಡಲಾಗಿದೆ. ಇವುಗಳ ಕಡಿಮೆ ಸಂಖ್ಯೆಗಳ ಕಾರಣ ಇವುಗಳ ಬೇಟೆ, ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಲಾಗಿದೆ ಮತ್ತು ಸಂಪೂರ್ಣ ಕಾನೂನುಬಾಹಿರವಾಗಿದೆ.
ಸೈಜ್ ಆಧರಿಸಿ ಇವುಗಳ ಬೆಲೆ ನಿರ್ಧರಿಸಲಾಗುತ್ತದೆನಿಷೇಧದ ಕಾರಣ ಸ್ಮಗ್ಲರ್ಗಳು ಈ ಹಲ್ಲಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ ಮತ್ತು ಅವುಗಳಿಗೆ ಭಾರಿ ಬೆಲೆ ಪಡೆಯುತ್ತಾರೆ. ವರದಿಗಳ ಪ್ರಕಾರ, ಗಿಕ್ಕೋ ಹಲ್ಲಿಯ ಬೆಲೆ ಅವುಗಳ ಸೈಜ್ ಅನ್ನು ಆಧರಿಸಿ ಇರಲಿದೆ.
ಒಂದು ಸಾಮಾನ್ಯ ಹಲ್ಲಿ ರೂ. 70 ರಿಂದ 80 ಲಕ್ಷ ರೂ.ಗಳಿಕೆ ಮಾರಾಟವಾಗುತ್ತದೆ. ಒಂದು ವೇಳೆ ಹಲ್ಲಿಯ ಗಾತ್ರ ದೊಡ್ಡದಾಗಿದ್ದರೆ, ಅದು ಒಂದು ಕೋಟಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತದೆ.ಏಕೆ ಈ ಹಲ್ಲಿಗೆ ಇಷ್ಟೊಂದು ಬೇಡಿಕೆಹಲವು ರೀತಿಯ ಕಾಯಿಲೆಗಳ ಔಷಧಿ ತಯಾರಿಕೆಗೆ ಗಿಕ್ಕೋ ಹಲ್ಲಿ ಬಳಕೆಯಾಗುತ್ತದೆ.
ಈ ಹಲ್ಲಿಯ ಮಾಂಸ ನಪುಂಸಕತೆ, ಡಯಾಬಿಟಿಸ್, ಏಡ್ಸ್ ಹಾಗೂ ಕ್ಯಾನ್ಸರ್ ನಂತಹ ಗಂಭೀರ ಮಾರಣಾಂತಿಕ ಕಾಯಿಲೆಗಳಲ್ಲಿ ಭಾರಿ ಲಾಭ ನೀಡುತ್ತದೆ. ಚೀನಾದಲ್ಲಿ ಹಲವು ಸಾಂಪ್ರದಾಯಿಕ ಔಷಧಿಗಳ ತಯಾರಿಕೆಗೆ ಈ ಹಲ್ಲಿಯನ್ನು ಬಳಸಲಾಗುತ್ತದೆ.
ಇದೇ ರೀತಿಯ ಹಲವು ಕಾರಣಗಳಿಂದ ಈ ಹಲ್ಲಿಗೆ ಭಾರಿ ಬೇಡಿಕೆ ಇದೆ.