ರಾಜ್ಯ
ಈಜಲು ತೆರಳಿದ್ದ ಮೂವರು ನೀರುಪಾಲು.

ತುಂಗಾಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ನವೀನ್ ಕೂರಗುಂದ(20). ವಿಕಾಶ್ ಪಾಟೀಲ್ (20), ನೇಪಾಳ ಮೂಲದ ಪ್ರೇಮ್ ಬೋರಾ ನೀರಿನಲ್ಲಿ ಮುಳುಗಿ ಮೃತಪಟ್ಟವರು.
ನಿನ್ನೆ ಸಂಜೆ ಈಜಲು ಮೂವರು ನದಿ ಬಳಿ ತೆರಳಿದ್ದು ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಹುಡುಕಿದಾಗ ಮೂವರು ನೀರುಪಾಲಾದ ವಿಚಾರ ತಿಳಿದು ಬಂದಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಯಲ್ಲಿ ಪ್ರಕರಣ ದಾಖಲಾಗಿದೆ.