ರಾಜ್ಯ

ಇಲಿ ಕಚ್ಚಿದ್ದಕ್ಕೆ 5 ಲಕ್ಷ ಪರಿಹಾರ ಕೇಳಿದ ಭೂಪ, ಠಾಣಾ ಮೆಟ್ಟಿಲೇರಿದ ಪ್ರಕರಣ

ಬೆಂಗಳೂರು: ಇಲಿಯ ಜಟಾಪಟಿಯೊಂದು ಇದೀಗ ಠಾಣಾ ಮೆಟ್ಟಿಲೇರಿದೆ. ಇಲಿ ಕಚ್ಚಿದಕ್ಕೆ ವ್ಯಕ್ತಿಯೋರ್ವ ಲಕ್ಷ-ಲಕ್ಷ ಪರಿಹಾರಕ್ಕೆ ಬೇಡಿಕೆಯಿಟ್ಟ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ.

ಇಲಿ ವಿಚಾರಕ್ಕೆ ಅಪಾರ್ಟ್ಮೆಂಟ್ ನಿವಾಸಿಗಳು ಜಟಾಪಟಿಗಿಳಿದು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರಿನ ವೈರ್​ಗಳನ್ನು ಇಲಿ ಕಚ್ಚಿದ ಕಾರಣಕ್ಕೆ ವಾಃನ ಮಾಲೀಕ 5 ಲಕ್ಷ ಪರಿಹಾರಕ್ಕೆ ಬೇಡಿಕೆ ಇಟ್ಟು ರಂಪಾಟ ನಡೆಸಿದ್ದಾನೆ.

ಪರಿಹಾರ ಕೊಡದಿದ್ದಕ್ಕೆ ಅಪಾರ್ಟ್ಮೆಂಟ್ ಅಸೋಸಿಯೇಷನ್‌ ಅಧ್ಯಕ್ಷರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಬೇಸತ್ತ ಅಪಾರ್ಟ್ಮೆಂಟ್‌ ನಿವಾಸಿಗಳು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.ಗಂಗಾನಗರದ ಕಂಫರ್ಟ್‌ ಎನ್​ಕ್ಲೇವ್‌ ಅಪಾರ್ಟ್ಮೆಂಟ್‌ ಮುಂಭಾಗ ಕಸ ಸುರಿದ ಪರಿಣಾಮ ಕಾರಿನ ವೈರ್​ಅನ್ನು ಇಲಿ ಕಚ್ಚಿದೆ.

ಇನೋವಾ ಕಾರಿನ ವೈಯರ್‌ ಅನ್ನು ಇಲಿ ಕಚ್ಚಿ ತುಂಡರಿಸಿತ್ತು. ಇದರಿಂದ ಕಾರ್ ವೈರಿಂಗ್ ಮಾಡಿಸಲು 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಾರಿನ ಮಾಲೀಕ ಡಿಮ್ಯಾಂಡ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಅಪಾರ್ಟ್ಮೆಂಟ್ ನಿವಾಸಿಗಳು ಇಲಿ ವಿಚಾರಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button