ಅಪರಾಧರಾಜ್ಯ

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು

ಇಬ್ಬರು ಮಕ್ಕಳ ಜೊತೆಗೆ ಚೆಕ್​ ಡ್ಯಾಮ್​ಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರ್ಪಿತಾ (28), ಮಾನಸ (6), ಮದನ್ (4) ಮೃತಪಟ್ಟವರು.

ಅರ್ಪಿತಾ ಜಾನಕಲ್ ತಾಂಡಾ ನಿವಾಸಿಯಾಗಿದ್ದು, ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಶರಣಾಗಿರುವ ಬಗ್ಗೆ ಮಾಹಿತ ಲಭ್ಯವಾಗಿದೆ.

ಪತ್ನಿ ಅರ್ಪಿತಾ ಪತಿ ಮಂಜಾನಾಯ್ಕ್ ಅನುಮಾನ ಪಡುತ್ತಿದ್ದ. ಕುಡಿದು ಹಲ್ಲೆ ನಡೆಸುತ್ತಿದ್ದ. 8 ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು.

ಆತ್ಮಹತ್ಯೆಗೂ ಮುನ್ನ ಅರ್ಪಿತಾ ಸೆಲ್ಫಿ ವಿಡಿಯೊ ಮಾಡಿದ್ದಾರೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button