Uncategorized
ಇಡಿ ಸಮನ್ಸ್ ನೀಡಿದ ಬೆನ್ನಲ್ಲೇ ಸೋನಿಯಾ ಗಾಂಧಿಗೆ ಕೊರೋನಾ ಪಾಸಿಟಿವ್

ರಾಷ್ಟೀಯ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೋವಿಡ್ ಸೊಂಕು ತಗುಲಿದ್ದು ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹೊರಡಿಸಿದ ಸಮನ್ಸ್ ಸಂಬಂದ ಜೂನ್ 8 ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗಬೇಕ್ಕಾಗಿದ್ದು ,ಅಷ್ಟರೊಳಗೆ ಕೋವಿಡ್‍ನಿಂದ ಗುಣಮುಖರಾಗುವುದು ಅನುಮಾನವಾಗಿದೆ.
ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಕಳೆದ ವಾರದಿಂದ ಸೋನಿಯಾ ಗಾಂಧಿ ಅವರು ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಧಣಿದಿದ್ದರು, ಜ್ವರ ಬಂದ ಹಿನ್ನಲೆಯಲ್ಲಿ ನೆನ್ನೆ ಸಂಜೆ ಅವರು ಕೋವಿಡ್ -19 ಪರೀಕ್ಷೆ ನಡೆಸಲಾಯಿತು.
ಸೌಮ್ಯ ರೋಗಲಕ್ಷಣ ಕಂಡು ಬಂದ ಇನ್ನಲೆಯಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ ಎಂದು ತಿಳಿಸಿದರು. ವೈದ್ಯಕೀಯ ಸಮಾಲೋಚನೆ ನಡೆದಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.