ಇಟಲಿಯ ಯುವತಿ ಗೌತಮಿ ಯಾದನಾರ್ ರ ಭಗವಾನ್ ಬುದ್ಧರ ಮೇಲಿನ ಪ್ರೀತಿ

ಇಟಲಿಯ ಯುವತಿ ಗೌತಮಿ ಯಾದನಾರ್ ಭಗವಾನ್ ಬುದ್ಧರ ಪ್ರೀತಿ,ಕರುಣೆ ಮತ್ತು ಮಾನವ ಕಲ್ಯಾಣಕಾರಿ ವಿಚಾರಗಳಿಂದ ಪ್ರಭಾವಿತಳಾಗಿ ಬುದ್ಧರ ಧಮ್ಮದಿಂದ ಸ್ಫೂರ್ತಿಯನ್ನು ಪಡೆದು ಇಟಲಿಯಿಂದ ಮ್ಯಾನ್ಮಾರ್‌ಗೆ ಬರುತ್ತಾಳೆ. ಮ್ಯಾನ್ಮಾರನಲ್ಲಿ ತಥಾಗತ್ ಬುದ್ಧರ ಧಮ್ಮವನ್ನು ಆಳವಾಗಿ ಅಧ್ಯಯನ ಮಾಡುತ್ತಾಳೆ. ಧ್ಯಾನ ಸಾಧನೆಯ ಅಭ್ಯಾಸವನ್ನು ಮಾಡುತ್ತಾಳೆ. ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಲಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬುದ್ಧರ ಬೋಧನೆಗಳನ್ನು ತಿಳಿದುಕೊಳ್ಳುತ್ತಾಳೆ.ಮ್ಯಾನ್ಮಾರ್‌ನ ಐತಿಹಾಸಿಕ ಮಾಂಡಲೆ ಎಂಬ ನಗರದಲ್ಲಿ ಅಂತಿಮವಾಗಿ ತಥಾಗತರು ಹೇಳಿದ ‘ನಿರ್ವಾಣ’ದ ಮಾರ್ಗವನ್ನು ಅನುಸರಿಸಲು ನಿರ್ಧರಿಸುತ್ತಾಳೆ. ಮಹಾಪ್ರಜಾಪತಿ ಗೌತಮಿ, ಮಾತೆ ಯಶೋಧರಾ,ಮಹಾರಾಣಿ ಖೇಮಾ, ರಾಜಗಣಿಕಾ ಆಮೃಪಾಲಿ ಅಂತಹ ಮಹಾಮಾತೆಯರು ಪಡೆದ ನಿವಾ೯ಣದ ದಾರಿಯಲ್ಲಿಯೇ ಸಾಗಲು ಇಚ್ಛಿಸುತ್ತಾಳೆ.ಇಟಾಲಿಯನ್ ಹುಡುಗಿ ಗೌತಮಿ ಯಾದನರ್ ಮೂರು ದಿನಗಳ ಹಿಂದೆಯೇ ಅಂದರೆ ಮೇ 7 ರಂದು ಲೌಕಿಕ ಸುಖಗಳನ್ನು ತ್ಯಜಿಸಿ ಬಿಕ್ಖೂಣಿಯ ಜೀವನದಲ್ಲಿ ಪ್ರವೇಶವನ್ನು ಪಡೆದಿದ್ದಾಳೆ.ಬುಧ್ಧರು ಹೇಳಿದ ಮಾನವ ಕಲ್ಯಾಣಕಾರಿ ವಿಚಾರಗಳನ್ನು ತನ್ನ ಜಿವನುದ್ದಕ್ಕು ಪ್ರಚಾರ ಮತ್ತು ಪ್ರಸಾರ ಮಾಡುವೆ ಎಂದು ನಿಧಾ೯ರ ಮಾಡಿದ್ದಾಳೆ…ಸಾಧು…. ಸಾಧು….. ಸಾಧು….. ಧಮ್ಮಚಕ್ರ