ಅಪರಾಧ

ಆಸ್ತಿಗಾಗಿ ತಾಯಿ ಕೊಲೆಗೆ ಸಂಚು ಪಾಪಿ ಮಗ ಜೈಲುಪಾಲು

ಕೋಟ್ಯಾಂತರ ಮೌಲ್ಯದ ಆಸ್ತಿಗಾಗಿ ಜನ್ಮ ಕೊಟ್ಟ ತಾಯಿಯನ್ನೇ ಕೊಲ್ಲಲು ಸಂಚು ರೂಪಿಸಿದ್ದ ಪಾಪಿ ಮಗನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.ಆರ್.ಟಿ.ನಗರದ ಜಾನ್ ಡಿ ಕ್ರೂಸ್( ೬೫) ಎಂಬಾತ ೮೮ ವರ್ಷದ, ವಯಸ್ಸಾದ ತಾಯಿಯನ್ನು ಕೊಲ್ಲಲು ಯತ್ನಿಸಿ ಜೈಲು ಪಾಲಾಗಿದ್ದಾನೆ.

೮೮ ವರ್ಷದ ಕ್ಯಾಥರಿನ್?ಗೆ ನಾಲ್ವರು ಮಕ್ಕಳಿದ್ದು ನಾಲ್ವರ ಪೈಕಿ ಮೊದಲನೆಯವ ಆರೋಪಿ ಜಾನ್, ಇನ್ನಿಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿದ್ದಾರೆ. ಮತ್ತೋರ್ವ ಪುತ್ರಿ ಆಶ್ರಮದಲ್ಲಿದ್ದಾರೆ.ಕ್ಯಾಥರಿನ್ ಅವರು ಮೊದಲ ಮಗನ ಹೆಸರಿಗೆ ಆಸ್ತಿ ಬರೆದಿದ್ದರು. ವಯಸ್ಸಾದ ಕಾರಣ ಕ್ಯಾಥರಿನ್ ಅವರಿಗೆ ಅನೇಕ ಆರೋಗ್ಯ ಸಮಸ್ಯೆಗಳಿದ್ದವು.

ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಕೆಗೆ ನಿರಂತರ ಆಕ್ಸಿಜನ್ ಪೂರೈಕೆ ಅಗತ್ಯ ಇತ್ತು. ಹೀಗಾಗಿ ಅಮೆರಿಕಾದ ಮಗ ತಾಯಿಯನ್ನು ನೋಡಿಕೊಳ್ಳಲು ನಗರಕ್ಕೆ ಕೇರ್ ಟೇಕರ್ ಕಳಿಸಿದ್ದರು.

ಆದರೆ ಮತ್ತೊಂದು ಕಡೆ ಜಾನ್ ಗೆ ಆಸ್ತಿ ಬರೆದು ಕೊಟ್ಟಿದ್ದರೂ ಬದುಕಿದ್ದ ತಾಯಿ ಮೇಲೆ ಆತನಿಗೆ ಕೋಪ ಇತ್ತು. ಇದೇ ವಿಚಾರವಾಗಿ ತಾಯಿ ಜೊತೆ ಆಗಾಗ ಜಗಳ ಮಾಡುತ್ತಿದ್ದ.ಕಳೆದ ಸೆ.೨೯ರಂದು ಸಂಜೆ ಮನೆಗೆ ನುಗ್ಗಿದ್ದ ಜಾನ್? ಗಲಾಟೆ ಮಾಡಿದ್ದಾನೆ.

ಕೇರ್ ಟೇಕರ್ ಹೊರಗೆ ತಳ್ಳಿ ತಾಯಿ ಕೊಲೆಗೆ ಯತ್ನಿಸಿದ್ದಾನೆ. ತಾಯಿ ಆಕ್ಸಿಜನ್ ಪೈಪ್ ಕಿತ್ತು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೇರ್ ಟೇಕರ್ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿ ವೃದ್ಧೆಯನ್ನ ರಕ್ಷಿಸಿದ್ದ ಆರ್ ಟಿನಗರ ಪೊಲೀಸರು ಕೇರ್ ಟೇಕರ್ ದೂರಿನ ಮೇರೆಗೆ ಜಾನ್ ಡಿ ಕ್ರೂಸ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button