ಆಲಿಯಾ ಹಿಂದಿಕ್ಕಿ ಜನಪ್ರಿಯ ನಟಿ ಪಟ್ಟಕ್ಕೇರಿದ ಸಮಂತಾ

ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರು ಬಾಲಿವುಡ್‌ನಟಿ ಆಲಿಯಾ ಭಟ್ ಅವರನ್ನು ಹಿಂದಿಕ್ಕಿ ಭಾರತದ ಅತ್ಯಂತ ಜನಪ್ರಿಯ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಮತ್ತೋಮ್ಮೆ ಭಾರಿ ಸದ್ದು ಮಾಡಿದ್ದಾರೆ.
ನಾಗಚೈತನ್ಯ ಅಕ್ಕಿನೇನಿ ಅವರಿಂದ ವಿಚ್ಚೇದನ ಪಡೆದ ಬಳಿಕ ಸಮಂತಾ ರುತ್ ಪ್ರಭು ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಲ್ಲಿದ್ದಾರೆ. ಇದೀಗ ನಂಬರ್ ಒನ್ ನಟಿ ಎನಿಸಿಕೊಂಡಿದ್ದಾರೆ.
ಸಮಂತಾ ರುತ್ ಪ್ರಭು ಬಳಿಕ ದೀಪಿಕಾ ಪಡುಕೋಣೆ, ಆಲಿಯಾ ಭಟ್, ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ನಂತರದ ಸ್ಥಾನದಲ್ಲಿದ್ದಾರೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್‌ನ ಊ ಅಂತವಾ ಹಾಡಿನಲ್ಲಿ ಸಮಂತಾ ರುತ್ ಪ್ರಭು ತನ್ನ ಮಾದಕ ನೃತ್ಯದ ಮೂಲಕ ಎಲ್ಲರನ್ನು ಬೆರಗುಗೊಳಿಸಿ ಚಿತ್ರರಸಿಕರನ್ನು ಸೆಳೆದಿದ್ದರು.ಓರ್ಮ್ಯಾಕ್ಸ್ ಮೀಡಿಯಾ ಇತ್ತೀಚೆಗೆ ’ಮೋಸ್ಟ್ ಪಾಪ್ಯುಲರ್ ಫೀಮೇಲ್ ಸ್ಟಾರ್ಸ್’ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಆಲಿಯಾ ಭಟ್, ಪೂಜಾ ಹೆಗ್ಡೆ ಸೇರಿದಂತೆ ಎಲ್ಲಾ ಜನಪ್ರಿಯ ಬಾಲಿವುಡ್ ನಟಿಯರನ್ನು ಹಿಂದಿಕ್ಕಿ ನಂತರ ಸಮಂತಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.ಆಲಿಯಾ ಭಟ್ ೨ ನೇ ಸ್ಥಾನದಲ್ಲಿದ್ದರೆ, ಮೂರು, ನಾಲ್ಕು ಮತ್ತು ಐದನೇ ಸ್ಥಾನವನ್ನು ಕ್ರಮವಾಗಿ ನಯನತಾರಾ, ಕಾಜಲ್ ಅಗರ್ವಾಲ್ ಮತ್ತು ದೀಪಿಕಾ ಪಡುಕೋಣೆ ಪಡೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ, ಕೀತಿ ಸುರೇಶ್ ಮತ್ತು ಕತ್ರಿನಾ ಕೈಪ್ ಆರು, ಏಳು ಮತ್ತು ಎಂಟು ಸ್ಥಾನಗಳಲ್ಲಿದ್ದಾರೆ.
ಪೂಜಾ ಹೆಗ್ಡೆ ಮತ್ತು ಅನುಷ್ಕಾ ಶೆಟ್ಟಿ ಕೂಡ ಭಾರತದ ಜನಪ್ರಿಯ ನಟಿಯರ ಪಟ್ಟಿಯಲ್ಲಿದ್ದಾರೆ.ಜನಪ್ರಿಯ ನಟರ ಪಟ್ಟಿಯಲ್ಲಿ ವಿಜಯ್ ಅಗ್ರಸ್ಥಾನದಲ್ಲಿದ್ದಾರೆ, ನಂತರ ಪ್ರಭಾಸ್, ಆರ್ ಆರ್‌ಆರ್ ಸ್ಟಾರ್ ಜೂನಿಯರ್ ಎನ್ ಟಿಆರ್.
ಏತನ್ಮಧ್ಯೆ, ಅಲ್ಲು ಅರ್ಜುನ್ ಮತ್ತು ಕೆಜಿಎಫ್ ಸ್ಟಾರ್ ಯಶ್ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ವರದಿಯ ಪ್ರಕಾರ ಸಮಂತಾ ರುತ್ ಪ್ರಭು ಅವರು ಅಪರೂಪದ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವದಂತಿಗಳಿವೆ ಮತ್ತು ಚಿಕಿತ್ಸೆಗಾಗಿ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ವರದಿಗಳು ಸಹ ಇದ್ದವು.
ಸಮಂತಾ ಅವರ ಮ್ಯಾನೇಜರ್ ಅಂತಹ ಮಾಹಿತಿಗೆ ಪ್ರತಿಕ್ರಿಯಿಸಿ ಇದು ಕೇವಲ ಗಾಸಿಪ್ ಎಂದು ಹೇಳುವ ಮೂಲಕ ವದಂತಿಗಳನ್ನು ತಳ್ಳಿಹಾಕಿದರು.