ಆರ್‌ಎಸ್‌ಎಸ್ ನಿಷೇಧಕ್ಕೆ ಸಿದ್ದು ಆಗ್ರಹ

ಯಾರೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಾರೋ, ಯಾರು ಕಾನೂನಿಗೆ ವಿರುದ್ಧವಾಗಿ ಇರುತ್ತಾರೋ ಅವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಿಎಫ್‌ಐ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ರೀತಿಯಲ್ಲೇ ಆರ್‌ಎಸ್‌ಎಸ್‌ನವರು ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು.
ಶಾಂತಿ ಹಾಳು ಮಾಡುವ ಯಾವುದೇ ಸಂಘಟನೆಯಾದರೂ ನಿಷೇಧ ಮಾಡಬೇಕು ಎಂದರು.ಪಿಎಫ್‌ಐ ನಿಷೇಧಿಸುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ ಎಂಬ ಬಿಜೆಪಿ ಟ್ವೀಟ್‌ಗೆ ತಿರುಗೇಟು ನೀಡಿರುವ ಸಿದ್ಧರಾಮಯ್ಯ, ಇಷ್ಟು ದಿನ ಯಾಕೆ ಮಾಡಿರಲಿಲ್ಲ.
ಇಷ್ಟು ದಿನ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.ಬಿ.ಕೆ. ಹರಿಪ್ರಾಸದ್ ಹೇಳಿಕೆಪಿಎಫ್‌ಐ ನಿಷೇಧ ಚುನಾವಣಾ ಗಿಮಿಕ್ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.ಪಿಎಫ್‌ಐ ನಿಷೇಧ ಮಾಡುವುದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ.
ಪ್ರಧಾನಿ ಮೋದಿಗೆ ಬೆದರಿಕೆ ಇದೆ ಎಂದುಹೇಳಿದ್ದಾರೆ. ಗುಜರಾತ್ ಚುನಾವಣೆ ಬಂದಾಗ ಮೋದಿಗೆ ಕೊಲೆ ಬೆದರಿಕೆ ಬರುತ್ತದೆ. ಅಧಿಕಾರಕ್ಕೆ ಬಂದು ೮ ವರ್ಷವಾಗಿದೆ. ಏನು ಮಾಡುತ್ತಿದ್ದರು. ಇಷ್ಟು ವರ್ಷ ಕೈಗೆ ಗೊರಂಟಿ ಹಾಕಿಕೊಂಡಿದ್ದರಾ.
ಇದು ಚುನಾವಣಾ ಸ್ಟಂಟ್ ಅಷ್ಟೇ. ಅನುಕಂಪ ಗಿಟ್ಟಿಸಿಕೊಳ್ಳಲು ಪಿಎಫ್‌ಐ ನಿಷೇಧ ಮಾಡಿದ್ದಾರೆ ಎಂದು ಅವರು ಹೇಳಿದರು.