ಆಯ ನೀಳ ಸಯಿಳೋ ನಾಟಕ-ಸಚಿವ ಅಶ್ವಿನಿಕುಮಾರ್ ಚಾಲನೆ

ರವೀಂದ್ರ ಕಲಾ ಕ್ಷೇತ್ರದಲ್ಲಿ ಒಡಿಶಾದ ಕಲೆ, ಸಂಗೀತ, ನಾಟಕ, ಸಂಸ್ಕೃತಿ ಕುರಿತ ವೈಭವದ “ಒಡಿಶಾ ಉತ್ಸವ” ;ವಿಶ್ವ ವಿಖ್ಯಾತ ಪುರಿ ಜಗನ್ನಾಥ್, ಭಗವಾನ್ ವಿಷ್ಣು ಆಧಾರಿತ ಆಯ ನೀಳ ಸಯಿಳೋ ಎಂಬ ನಾಟಕ ಪ್ರದರ್ಶನಕ್ಕೆ ಒಡಿಸ್ಸಾ ಸಚಿವ ಅಶ್ವಿನಿ ಕುಮಾರ್ ಚಾಲನೆ ನೀಡಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ದಿನಗಳ ಒಡಿಶಾದ ಸಂಗೀತ, ಕಲೆ, ಸಾಹಿತ್ಯ ಸಾಂಸ್ಕೃತಿಕ ಸುಗ್ಗಿ “ಒಡಿಶಾ ಉತ್ಸವ” ಕ್ಕೆ ಶುಕ್ರವಾರ ಅದ್ದೂರಿ ಚಾಲನೆ ದೊರೆತಿದೆ. ಒಡಿಶಾ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತ್ಯ ಗೋಷ್ಠಿಗೆ ಒಡಿಶಾ ಪ್ರವಾಸೋದ್ಯಮ, ಒಡಿಶಾ ಭಾಷೆ, ಸಾಹಿತ್ಯ – ಸಂಸ್ಕೃತಿ ಸಚಿವ ಅಶ್ವಿನಿ ಕುಮಾರ್ ಚಾಲನೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಡಿ.ವಿ. ವಂತಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ಪ್ರೊ; ಎಚ್.ಎಸ್. ಶಿವಪ್ರಕಾಶ್, ಒಡಿಶಾ ಸಂಸ್ಕೃತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮಧು ಸುದಾನ್ ಪಧಿ ಮತ್ತಿತರು ಉಪಸ್ಥಿತರಿದ್ದರು. ಸಂಜೆ ಒಡಿಶಾ ಸಾಂಸ್ಕೃತಿಕ ಉತ್ಸವವನ್ನು ಸಚಿವ ಅಶ್ವಿನಿ ಕುಮಾರ್ ಪಾತ್ರ ಉದ್ಘಾಟಿಸಿದರು.
ರಂಗಕರ್ಮಿ ಅರುಂಧತಿ ನಾಗ್, ಒಡಿಶಾ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಅರುಣಾ ಮೊಹಂತಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ವಿಶ್ವ ವಿಖ್ಯಾತ ಪುರಿ ಜಗನ್ನಾಥ್, ಭಗವಾನ್ ವಿಷ್ಣು ಆಧಾರಿತ ಆಯ ನೀಳ ಸಯಿಳೋ ಎಂಬ ನಾಟಕ ಪ್ರದರ್ಶನ ಗಮನ ಸೆಳೆಯಿತು. ಇದಲ್ಲದೇ ಒಡಿಶಾದ ಖ್ಯಾತ ಪಟಚಿತ್ರ ಕಲಾ ಪ್ರಕಾರವನ್ನು ಅಲ್ಲಿನ ರಘುರಾಜ್ ಪುರ್ ಹಳ್ಳಿಯ ಕಲಾವಿದರು ಪ್ರದರ್ಶಿಸಿದರು.
ಒಣಗಿದ ಎಲೆಯಲ್ಲಿ ರಾಮಾಯಣ, ಮಹಾಭಾರತ ಮತ್ತಿತರ ವಿಷಯಗಳ ಬಗ್ಗೆ ಕಲಾ ರಚನೆಗಳನ್ನು ರಚಿಸಿ ಗಮನ ಸೆಳೆದರು. ಗೋಡಾ ನಾಚ್, ಸಂಬಲ್ ಪುರಿ ನೃತ್ಯ, ಚಾವ್ ಡಾನ್ಸ್ ಗಳು ಗಮನ ಸೆಳೆಯಲಿವೆ.ನೃತ್ಯ ಪಟು ಅನುಪಮಾ ರಾಜೇಂದ್ರ, ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಮತ್ತಿತರಿಂದ ವೈಭವದ ಸಂಗೀತ, ನೃತ್ಯ ಪ್ರಕಾರಗಳಿಗೆ ಜೀವ ತುಂಬಲಿದ್ದಾರೆ.
ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಮೂರು ದಿನಗಳ ಕಾಲ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಇದು ಅತ್ಯಂತ ಮಹತ್ವದ ಸಾಂಸ್ಕೃತಿಕ ಉತ್ಸವವಾಗಿದೆ. ಪದ್ಮಶ್ರೀ ಉತ್ಸವ್ ಚ ಘೋಡಾ ನಾಚ್ ಅವರೊಂದಿಗೆ.
ದಾಸ್ & ಗ್ರೂಪ್, ಲೋಕನಾಥ್ ಅವರಿಂದ ಚೌ ನೃತ್ಯ, ದಾಸ್ & ಗ್ರೂಪ್, ದಿಲೀಪ್ ಕುಮಾರ್ ಸಾಹೂ ಮತ್ತು ಗ್ರೂಪ್ ಅವರಿಂದ ಸಂಬಲ್ಪುರಿ ನೃತ್ಯ ಮತ್ತು ಸಿಂಘಾರಿ ನೃತ್ಯಗಳು ಉತ್ಸವದಲ್ಲಿ ವಿಶೇಷ ಮೆರಗು ತರಲಿವೆ.