Life Style
ಆಗಸ್ಟ್ 15 ರಿಂದಲೇ ಏರ್ಟೆಲ್ 5ಜಿ ಸೇವೆ ಆರಂಭವಾಗಲಿದೆ

ನವದೆಹಲಿ: ಆಗಸ್ಟ್ 15 ರಿಂದಲೇ ಏರ್ಟೆಲ್ 5ಜಿ ಸೇವೆ ಆರಂಭವಾಗಲಿದೆ. ಇತ್ತೀಚೆಗಷ್ಟೇ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ನಡೆದಿತ್ತು. ಭಾರತದಲ್ಲಿ 5ಜಿ ಸೇವೆ ಯಾವಾಗ ಆರಂಭವಾಗಲಿದೆ ಎನ್ನುವ ನಿರೀಕ್ಷೆ ಗ್ರಾಹಕರಲ್ಲಿತ್ತು. ಈ ತಿಂಗಳಲ್ಲೇ ಸೇವೆಯನ್ನು ಆರಂಭಿಸಲು ಭಾರ್ತಿ ಏರ್ಟೆಲ್ ಮುಂದಾಗಿದೆ.ಈ ಮೂಲಕ ಭಾರತದಲ್ಲಿ 5ಜಿ ಸೇವೆ ನೀಡುವ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆಗೆ ಏರ್ಟೆಲ್ ಪಾತ್ರವಾಗಲಿದೆ.
ತನ್ನ ಮೊದಲ 5ಜಿ ಗುತ್ತಿಗೆಯನ್ನು ಎರಿಕ್ಸನ್ ಕಂಪನಿಗೆ ನೀಡಿರುವ ಏರ್ಟೆಲ್ ಬೆಂಗಳೂರು ಸೇರಿದಂತೆ ದೇಶದ 13 ಮಹಾನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಂಡಿದೆ. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ವಾಣಿಜ್ಯ 5ಜಿ ಸೇವೆಗಳನ್ನು ಏರ್ಟೆಲ್ ಆರಂಭಿಸಲಿದೆ ಎಂದು ಹೇಳಲಾಗಿದೆ.