
ಆಂಧ್ರದಿಂದ ರಾತ್ರಿ ವೇಳೆ ನಗರಕ್ಕೆ ಬಂದು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬೇಗೂರು ಠಾಣೆ ಪೆÇಲೀಸರು ಬಂಧಿಸಿ 45 ಲಕ್ಷ ರೂ. ಮೌಲ್ಯದ 45 ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಹನುಮಂತರೆಡ್ಡಿ ಬಂತ ಆರೋಪಿ. ಈತ ರಾತ್ರಿ ವೇಳೆ ಆಂಧ್ರದಿಂದ ಬೈಕ್‍ನಲ್ಲಿ ನಗರಕ್ಕೆ ಬಂದು ತಂದಿದ್ದ ಬೈಕ್‍ನ್ನು ಬೇರೆಡೆ ಪಾರ್ಕಿಂಗ್ ಮಾಡಿ, ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿನ ಬೈಕ್‍ಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ವಾಪಾಸ್ ಹೋಗುತ್ತಿದ್ದನು.
ತದನಂತರ ಮತ್ತೆ ಬಂದು ತಾನು ನಿಲ್ಲಿಸಿದ್ದಂತಹ ಬೈಕ್‍ನ್ನು ತೆಗೆದುಕೊಂಡು ಹೋಗುತ್ತಿದ್ದನು. ಇದೇ ರೀತಿ ನಗರದಲ್ಲಿ 45 ಬೈಕ್‍ಗಳನ್ನು ಕಳ್ಳತನ ಮಾಡಿದ್ದ ಆಂಧ್ರಪ್ರದೇಶದ ಆರೋಪಿಯನ್ನು ಬಂಸಿ ನಗರದ ವಿವಿಧ ಕಡೆಗಳಲ್ಲಿ ಕಳವಾಗಿದ್ದ 8 ದ್ವಿಚಕ್ರ ವಾಹನಗಳು ಸೇರಿ ಒಟ್ಟು 45 ವಿವಿಧ ಮಾದರಿಯ ಬೈಕ್‍ಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಬಂಧನದಿಂದ ಬೇಗೂರು ಠಾಣೆಯಲ್ಲಿ ದಾಖಲಾಗಿದ್ದ 2 ದ್ವಿಚಕ್ರ ವಾಹನ ಕಳವು ಪ್ರಕರಣ, ಮಡಿವಾಳ 10, ಎಲೆಕ್ಟ್ರಾನಿಕ್ ಸಿಟಿ 7, ಪರಪ್ಪನ ಅಗ್ರಹಾರ 7, ಬೊಮ್ಮನಹಳ್ಳಿ 3, ಬಂಡೆಪಾಳ್ಯ, ಜೆಪಿ ನಗರ, ಮಾರತ್‍ಹಳ್ಳಿ, ಪುಟ್ಟೇನಹಳ್ಳಿ, ಸುಬ್ರಹ್ಮಣ್ಯಪುರ, ಹೆಬ್ಬಗೋಡಿ, ಕುಂಬಳಗೋಡು ಹಾಗೂ ವರ್ತೂರು ಠಾಣೆಯ ತಲಾ ಒಂದೊಂದು ಪ್ರಕರಣ ಮತ್ತು ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳವಾಗಿರುವ 8 ದ್ವಿಚಕ್ರ ವಾಹನ ಪ್ರಕಣಗಳು ಸೇರಿ ಒಟ್ಟು 45 ಬೈಕ್‍ಗಳನ್ನು ಪತ್ತೆ ಹಚ್ಚಲಾಗಿದೆ.
ಆರೋಪಿಯು ಕದ್ದ ಬೈಕ್‍ಗಳನ್ನು ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಶ್ರೀನಾಥ್ ಮಹದೇವ ಜೋಶಿ ಮಾರ್ಗದರ್ಶನದಲ್ಲಿ ಸಹಾಯ ಪೊಲೀಸ್ ಆಯುಕ್ತ ಪವನ್, ಇನ್ಸ್‍ಪೆಕ್ಟರ್ ಶಿವಕುಮಾರ್ ಬ.ಮುಚ್ಚಂಡಿ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು 45 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.