ಅವಳಿ ಮಕ್ಕಳಿಗೆ ಜನ್ಮನೀಡಿದ ಯುವತಿ, ಆದರೆ ಎರಡೂ ಮಕ್ಕಳ ತಂದೆ ಬೇರೆಬೇರೆ..!

ಬ್ರೆಜಿಲ್‍ನ 19 ವರ್ಷದ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ವಿಚಿತ್ರ ಎಂದರೆ ಇಬ್ಬರೂ ಮಕ್ಕಳು ಪ್ರತ್ಯೇಕ ತಂದೆಯನ್ನು ಹೊಂದಿದ್ದಾರೆ.
ಬ್ರೆಜಿಲ್‍ನ ಗೊಯ್ಯಾಸ್‍ನ ಮನೋರಿಯಸ್ ಪ್ರದೇಶದ ಯುವತಿ ಅವಳಿಗೆ ಮಕ್ಕಳಿಗೆ ಜನ್ಮ ನೀಡಿದ್ದು, ಆದರೆ ಮಕ್ಕಳ ತಂದೆಯ ಬಗ್ಗೆ ಆಕೆಗೆ ಅನುಮಾನವಿತ್ತು. ಈ ಹಿನ್ನಲೆಯಲ್ಲಿ ಪಿತೃತ್ವ ಪರೀಕ್ಷೆ ನಡೆಸಲಾಯಿತು.
ಆ ವೇಳೆ ಎರಡೂ ಮಕ್ಕಳಿಗೂ ತಂದೆ ಬೇರೆ ಬೇರೆ ಎಂದು ಸಾಬೀತಾಗಿದೆ.ಯುವತಿ ಹೇಳಿಕೆಯ ಪ್ರಕಾರ ಒಂದೇ ದಿನ ತಾವು ಲೈಂಗಿಕ ಕ್ರಿಯೆ ನಡೆಸಿದ್ದು ಹೀಗಾಗಿ ಮಕ್ಕಳ ತಂದೆಯ ಬಗ್ಗೆ ಅನುಮಾನ ಹೊಂದಿದ್ದಾಗಿ ತಿಳಿಸಿದ್ದಾಳೆ.
ತಾನು ತಂದೆ ಎಂದು ಭಾವಿಸಿದ ವ್ಯಕ್ತಿ ಒಂದು ಮಗುವಿನ ಜನ್ಮಕ್ಕೆ ಕಾರಣವಾಗಿದ್ದು, ಮತ್ತೊಂದು ಮಗುವಿನ ಜನ್ಮಕ್ಕೆ ಅದೇ ದಿನ ನನ್ನೊಂದಿಗಿದ್ದ ಇನ್ನೊಬ್ಬ ವ್ಯಕ್ತಿ ಕಾರಣ ಎಂದು ಹೇಳಿದ್ದಾರೆ.
10 ಲಕ್ಷಕ್ಕೆ ಒಂದು ಈ ರೀತಿಯ ವಿಲಕ್ಷಣ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ. ವೈಜ್ಞಾನಿಕವಾಗಿ ಇದನ್ನು ಹೆಟೆರೊಪರೆಂಟಲ್ ಸೂಪರ್ ಫೆಂಡಕ್ಷನ್ ಎಂದು ಕರೆಯಲಾಗುತ್ತದೆ.
ಒಂದೇ ತಾಯಿಯ ಎರಡು ಅಂಡಾಣುಗಳು ವಿಭಿನ್ನ ಪುರುಷರೊಂದಿಗೆ ಫಲವತ್ತಿಸಿದಾಗ ಇದು ಘಟಿಸುತ್ತದೆ ಎಂದು ವೈದ್ಯ ಟುಲಿಯೊ ಜಾರ್ಜ್ ಫಾಂಕೊ ತಿಳಿಸಿದ್ದಾರೆ.ಮಕ್ಕಳು ತಾಯಿಯ ಅನುವಂಶಿಕ ವಸ್ತುಗಳನ್ನು ಹಂಚಿಕೊಳ್ಳುತ್ತವೆ.
ವಿಭಿನ್ನ ಜರಾಯುಗಳಲ್ಲಿ ಬೆಳೆಯುತ್ತವೆ. ವಿಶ್ವಾದ್ಯಂತ ಲಭ್ಯವಿರುವ ಮಾಹಿತಿ ಪ್ರಕಾರ ಈ ರೀತಿ 20 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.
ನವಜಾತ ಶಿಶುಗಳಿಗೆ 16 ತಿಂಗಳಾಗಿದ್ದು ತಂದೆಯೊಬ್ಬರು ಇಬ್ಬರೂ ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ, ನನಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ಅಗತ್ಯತೆಗಳನ್ನು ಪೂರೈಸುತ್ತಿದ್ದಾರೆ. ಜನನ ಪ್ರಮಾಣ ಪತ್ರದಲ್ಲಿ ಒಬ್ಬ ವ್ಯಕ್ತಿಯ ಹೆಸರನ್ನು ಮಾತ್ರ ದಾಖಲಿಸಲು ಅವಕಾಶವಿದೆ ಎಂದು ಆಕೆ ತಿಳಿಸಿದ್ದಾಳೆ.