ಅವರಪ್ಪನಾಣೆ! ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ

ರಾಜ್ಯದಲ್ಲಿ ಅವರಪ್ಪನಾಣೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಭವಿಷ್ಯ ನುಡಿದಿದ್ದಾರೆ.
ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಇಂದು ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಅಧಿಕಾರ ಸಿಗುವ ಮೊದಲೇ ಕಿತ್ತಾಟ ಶುರುವಾಗಿದೆ.
ಇನ್ನೂ ಮಗು ಹುಟ್ಟಿಲ್ಲ ಕುಲಾವಿ ಹೊಲಿಯಲಾಗುತ್ತಿದೆ. ಮುಖ್ಯಮಂತ್ರಿಯ ಹುದ್ದೆಗೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪೈಪೋಟಿಗೆ ಬಿದ್ದಿದ್ದಾರೆ ಎಂದರು.ಅವರಪ್ಪನಾಣೆ ಹೇಳುತ್ತೇನೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ ಎಂದರು.
ಕಾಂಗ್ರೆಸ್ ನಾಯಕರಿಗೆ ಯಾವ ಶಾಸ್ತ್ರದವರು ಹೇಳಿದ್ದಾರೋ ಗೊತ್ತಿಲ್ಲ. ನನಗೆ ಗೊತ್ತಿರುವ ಹಾಗೆ ಅವರಪ್ಪನಾಣೆ ಕಾಂಗ್ರೆಸ್ ಬರಲ್ಲ ಎಂದು ಪುನರುಚ್ಚರಿಸಿದರು.
ಸಂಬಳ ಕಟ್ಇದಕ್ಕೂ ಮೊದಲು ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಪರಿಶೀಲನೆ ನಡೆಸಿದ ಸಚಿವರು, ಬಯೋ ಮೆಟ್ರಿಕ್ ಹಾಜರಾತಿ ದಾಖಲಿಸಿದ ವೈದ್ಯರ ಸಂಬಳ ಕಡಿತ ಮಾಡುವುದಾಗಿ ಎಚ್ಚರಿಕೆ ನೀಡಿದರು.ಆಸ್ಪತ್ರೆಯಲ್ಲಿ ೧೦೦ ಹಾಸಿಗೆಗಳಿದ್ದು, ೮೦ ಹಾಸಿಗೆಗಳು ಬಳಕೆಯಲ್ಲಿವೆ.
ಉಳಿದ ೨೦ ಹಾಸಿಗೆಗಳನ್ನು ಐಸಿಯು ಸೇವೆಗೆ ಸಿದ್ಧಗೊಳಿಸದ ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಶೀಘ್ರವೇ ೨೦ ಹಾಸಿಗೆಗಳನ್ನು ಐಸಿಯು ಹಾಸಿಗೆಗಳನ್ನಾಗಿ ಪರಿವರ್ತಿಸಿ ಎಂದು ಸೂಚಿಸಿದರು.
ಪ್ರತಿ ಆಸ್ಪತ್ರೆಯಲ್ಲೂ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಬಯೋಮೆಟ್ರಿಕ್ ದಾಖಲಿಸಬೇಕು.
ಇದು ಸಂಬಳದೊಂದಿಗೆ ಲಿಂಕ್ ಆಗಿದ್ದು, ಹಾಜರಾತಿ ದಾಖಲಾಗದಿದ್ದರೆ ಸಂಬಳ ಕಡಿತವಾಗುತ್ತದೆ ಎಂದರು.ರಾಜ್ಯದ ಶೇ. ೮೦ರಷ್ಟು ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಪೂರ್ಣಗೊಂಡಿದೆ.
ಉಳಿದ ಶೇ. ೨೦ರಷ್ಟು ಶೀಘ್ರ ಆಗಲಿದೆ ಎಂದರು.