ಅವನು ನನ್ನವ, ಮದ್ವೆಯಾಗ್ದೇ ಇಲ್ಲಿಂದ ಕದಲಲ್ಲ: ಖ್ಯಾತ ನಟನ ಮನೆ ಮುಂದೆ ಮಧ್ಯರಾತ್ರಿ ನಟಿಯ ಧರಣಿ!

ಚೆನ್ನೈ: ತಮಿಳಿನ ಖ್ಯಾತ ನಟ ಸಿಂಬು ಮದುವೆ ವಿಷಯದಲ್ಲಿ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಇವರು ಎಷ್ಟೋ ಹುಡುಗಿಯರ ಕನಸಿನ ನಟ ಕೂಡ. ತಮ್ಮ ಬಾಳ ಸಂಗಾತಿ ಹೀಗೇ ಇರಬೇಕು ಎಂದುಕೊಳ್ಳುತ್ತಿರುವವರು ಅದೆಷ್ಟೋ ಮಂದಿ. ಇಂಥ ಸಿಂಬುವಿನ ಮನೆಯ ಮುಂದೆ ಕಿರುತೆರೆ ನಟಿಯೊಬ್ಬರು ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.
ನಟಿ ನಿಧಿ ಅಗರ್ವಾಲ್ ಜೊತೆಗೆ ಸಿಂಬು ಪ್ರೀತಿಯಲ್ಲಿ ಬಿದ್ದಿದ್ದಾರೆ. ಸದ್ಯದಲ್ಲೇ ಮದುವೆ ಆಗುತ್ತಾರೆ ಎಂದು ಇತ್ತೀಚೆಗೆ ಭಾರಿ ಸುದ್ದಿಯಾಗಿರುವ ಮಧ್ಯೆಯೇ ಕಿರುತೆರೆಯ ಪ್ರಸಿದ್ಧ ನಟಿ ಶ್ರೀನಿಧಿ ಸಿಂಬು ತಮಗೆ ಬೇಕು ಎಂದು ಪಟ್ಟುಹಿಡಿದು ಕುಳಿತಿರುವ ಘಟನೆ ನಡೆದಿದೆ.
ತಮಿಳಿನ ಪ್ರಸಿದ್ಧ ಧಾರಾವಾಹಿ ‘ಯಾರಡಿ ನೀ ಮೋಹಿನಿ’ ಖ್ಯಾತಿಯ ಶ್ರೀನಿಧಿ ಸಿಂಬು ಅವರ ಮನೆಗೆ ಮಧ್ಯರಾತ್ರಿ ಹೋಗಿದ್ದು, ಸಿಂಬು ಅವರನ್ನು ನೋಡಲೇಬೇಕು, ಅವರನ್ನು ಮದುವೆಯಾಗಲೇ ಇಲ್ಲಿಂದ ಕದಲಲ್ಲ ಎಂದು ಪಟ್ಟುಹಿಡಿದಿದ್ದಾರೆ. ಸಿಂಬು ಕುಟುಂಬದ ಸದಸ್ಯರು ಎಷ್ಟೇ ಸಮಾಧಾನ ಮಾಡಿದರೂ, ಅವರು ಅಲ್ಲಿಂದ ಕದಲಲಿಲ್ಲ ಎನ್ನಲಾಗಿದೆ.
ಅಂದಹಾಗೆ ಇದೇ ಮೊದಲಲ್ಲ. ಶ್ರೀನಿಧಿ ಹಿಂದೆ ಕೂಡ ಸಿಂಬುವನ್ನು ಮದುವೆಯಾಗುವುದಾಗಿ ಹೇಳಿದ್ದರು. ಶ್ರೀನಿಧಿ ಸಿಂಬು ಅವರ ಅಪ್ಪಟ ಅಭಿಮಾನಿ. ಈ ಹಿಂದೆ ತಾವು ಮದುವೆ ಆಗುವುದಾದರೆ, ಸಿಂಬು ಅವರನ್ನೇ ಆಗುತ್ತೇನೆ ಎಂದು ವಿಡಿಯೋ ಮಾಡಿದ್ದು, ವೈರಲ್ ಕೂಡ ಆಗಿತ್ತು. ಘಟನೆ ಕುರಿತು ಸಿಂಬು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.