ಸಿನಿಮಾ

ಅರ್ಜುನ್​ ಜನ್ಯ ಆಕ್ಷನ್‌ ಕಟ್‌ ಹೇಳಲಿರುವ ಶಿವಣ್ಣನ ಚಿತ್ರದ ಟೈಟಲ್​ ಅನೌನ್ಸ್​

ಇಂದು ಸೆಂಚ್ಯೂರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 60ನೇ ವರ್ಷದ ಜನ್ಮದಿನಕ್ಕೆ ಶಿವಣ್ಣನಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ವಿಶೇಷ ಸಂದರ್ಭದಲ್ಲಿ ಅರ್ಜುನ್​ ಜನ್ಯ ನಿರ್ದೇಶಿಸಲಿರುವ ಚಿತ್ರದ ಟೈಟಲ್‌ ಅನೌನ್ಸ್‌ ಆಗಿದೆ.

ಅರ್ಜುನ್‌ ಜನ್ಯ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಷನ್‌ನ ಈ ಸಿನಿಮಾಗೆ ‘45’ ಎಂದು ಹೆಸರಿಡಲಾಗಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ.

ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ನಟ ಶಿವರಾಜ್​ಕುಮಾರ್​ ಜೊತೆ ಸಿನಿಮಾ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಡೈರೆಕ್ಟರ್​ ಕ್ಯಾಪ್​ ಧರಿಸುತ್ತಿದ್ದಿ, ಈಗ ಟೈಟಲ್​ ಅನೌನ್ಸ್​ ಆಗಿದೆ. 45 ಎಂದು ಇದಕ್ಕೆ ಶೀರ್ಷಿಕೆ ಇಟ್ಟಿದ್ದು, ಶಿವಣ್ಣನ ಹೊಸ ಸಿನಿಮಾದ ಅಪ್‌ಡೇಟ್ಸ್‌ ಕೇಳಿ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಕನ್ನಡದಲ್ಲಿ ಶಿವರಾಜ್​ಕುಮಾರ್​ ಅವರೇ ಟೈಟಲ್​ ಲಾಂಚ್​ ಮಾಡಿದ್ದಾರೆ. ಇನ್ನಿತರ ಭಾಷೆಯಲ್ಲಿ ಅಲ್ಲಿನ ಸ್ಟಾರ್​ ಸೆಲೆಬ್ರಿಟಿಗಳು ಈ ಸಿನಿಮಾ ಟೈಟಲ್‌ ಲಾಂಚ್ ಮಾಡಿದ್ದಾರೆ.

ಅರ್ಜುನ್‌ ಜನ್ಯ ಚೊಚ್ಚಲ ಡೈರೆಕ್ಷನ್​ ಪ್ರಾಜೆಕ್ಟ್​ನಲ್ಲಿ ಅವರು ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅಲ್ಲದೇ 45 ಎಂಬ ಟೈಟಲ್‌ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ಮಲಯಾಳಂನಲ್ಲಿ ಪೃಥ್ವಿರಾಜ್​ ಸುಕುಮಾರ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ತಮಿಳಿನಲ್ಲಿ ಶಿವ ಕಾರ್ತಿಕೇಯನ್ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಈ ಚಿತ್ರವನ್ನು ಎಂ. ರಮೇಶ್​ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button