ರಾಜ್ಯ
ಅರಸೀಕೆರೆಯ ಆದಿಚುಂಚನಗಿರಿ ಆಂಗ್ಲ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿ ಯೋಗ ದಿನಾಚರಣೆ.

ಅರಸೀಕೆರೆಯ ಆದಿಚುಂಚನಗಿರಿ ಆಂಗ್ಲ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಯೋಗ ಚಿನ್ನೆಯನ್ನು ರಚಿಸುವುದರ ಮೂಲಕ ವಿಶೇಷವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶ್ರೀ ವಿನೋದ್ ಅಕ್ಕ, ಬಿಜೆಪಿ ಮುಖಂಡ ಶ್ರೀ ಮನೋಜ್ ಕುಮಾರ್,ವಕೀಲರಾದ ಆದಿಹಳ್ಳಿ ಲೋಕೇಶ್, ರೇವಣಸಿದ್ದಪ್ಪ, ಕಾಲೇಜಿನ ಪ್ರಾಂಶುಪಾಲರಾದ ಡಾ. ಲಿಂಗರಾಜು ಎಂ.ಜೆ ಹಾಗೂ ಶಾಲಾ ಕಾಲೇಜು ಶಿಕ್ಷಕರು ಮಕ್ಕಳು ಹಾಜರಿದ್ದರು.