ರಾಜ್ಯ
ಅರಸೀಕೆರೆಯ ಅಮರಗಿರಿ ಮಾಲೆಕಲ್ಲು ತಿರುಪತಿಯಲ್ಲಿ ಕಳ್ಳತನ, ಕಣ್ಮುಚ್ಚಿ ಕುಳಿತಂತಹ ತಾಲೂಕು ಆಡಳಿತ.

ಪ್ರಸಿದ್ಧ ಐತಿಹಾಸಿಕ ಸ್ಥಾನಗಳಲ್ಲಿ ಒಂದಾದಂತಹ ಹಾಗೂ ಕರ್ನಾಟಕಕದ ಚಿಕ್ಕ ತಿರುಪತಿ ಎಂದು ಹೆಸರುವಾಸಿಯಾದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅಮರಗಿರಿ ಮಾಲೆಕಲ್ಲು ತಿರುಪತಿಯ ಬೆಟ್ಟದ ಮೇಲಿರುವ ದೇವಸ್ಥಾನದ ಚಾವಣಿ ಮೇಲಿಂದ ಇಳಿದು ಬೀರುವಿನ ಬೀಗವನ್ನು ಹೊಡೆದು ಶ್ರೀ ವೆಂಕಟರಮಣ ಸ್ವಾಮಿಯವರ ಕಿರೀಟ ಶಂಕಚಕ್ರ ಹಾಗೂ ಇನ್ನಿತರ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಈ ಹಿಂದೆಯೇ ಒಂದು ಬಾರಿ ಬೀಗವನ್ನು ಒಡೆಯಲು ಪ್ರಯತ್ನಿಸಿರುವುದು ತಾಲೂಕು ಆಡಳಿತದ ಗಮನದಲ್ಲಿದೆ ಅಲ್ಲದೆ ಇತ್ತೀಚೆಗೆ ಕಲ್ಯಾಣಿ ಬಳಿ ಇರುವ ವಿಗ್ರಹಗಳನ್ನು ಕೆಲ ಕಿಡುಗೇಡಿಗಳು ಧ್ವಂಸ ಮಾಡಿರುವ ಪ್ರಕರಣ ಕೂಡ ಹಾಗಿದ್ದರೂ ತಾಲೂಕು ಆಡಳಿತ ಯಾವುದೇ ಮುಂಜಾಗ್ರತ ಕ್ರಮ ತೆಗೆದುಕೊಳ್ಳದೆ ಬೇಜವಾಬ್ದಾರಿ ತೋರುತ್ತಿರುವುದು ಎದ್ದು ಕಾಣುತ್ತಿದೆ. ಇದು ಭಕ್ತಾದಿಗಳ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.