
ಅರಸೀಕೆರೆ…..ಶ್ರೀ ವರ್ಧಮಾನ ಸ್ಥಾನಕ್ ವಾಸಿ ಜೈನ ಶ್ರಾವಕ ಸಂಘದ ಆಶ್ರಯದಲ್ಲಿ ಅರಸೀಕೆರೆಯ *ಪೇಟೆ ಬೀದಿಯಲ್ಲಿರುವ ಜೈನ ಸ್ಥಾನಕ್ಕೆ ಭವನದಲ್ಲಿ* ಇಂದು ಚಾತುರ್ಮಾಸದ ನಾಲ್ಕು ತಿಂಗಳ ಧಾರ್ಮಿಕ ಆರಾಧನೆಗಾಗಿ ಆಗಮಿಸಿದ *ಕರ್ನಾಟಕ ಗಜಕೇಸರಿ 1008 ಶ್ರೀ ಗಣೇಶ್ ಮಲ್ ಗುರೂಜಿ* ರವರ ಸೂಶಿಷ್ಯ ಮಹಾಸಾದ್ವಿ *ಶ್ರೀ ಆಗಮಶ್ರೀ ಜೀ ಹಾಗೂ ಧೈರ್ಯಶ್ರೀ ಜೀ* ಚತುರ್ಮಾಸ ಪ್ರವೇಶ ಇಂದು ನೆರವೇರಿತು..
ಈ ಸಂದರ್ಭದಲ್ಲಿ
ಜೈನ್ ಕಾನ್ಫರೆನ್ಸ್ ರಾಜ್ಯ ಉಪಾಧ್ಯಕ್ಷರಾದ ಚೇತನ್ ಜೈನ್* ಮಾತನಾಡಿ ಸುಮಾರು 77 ವರ್ಷಗಳ ಹಿಂದೆ ಗಣೇಶಮಲ್ ಗುರೂಜಿರವರ ಚಾತುರ್ಮಾಸ ಇದೆ ಪೇಟೆ ಬೀದಿಯ ಜೈನ ಸ್ಥಾನಕ್ಕೆ ಭವನದಲ್ಲಿ ನೆರವೇರಿತ್ತು… ನಂತರ ಅವರದೇ ಸಂಪ್ರದಾಯದ ಸಾಧ್ವಿಗಳ ಚಾತುರ್ಮಾಸ ಅರಸೀಕೆರೆಯಲ್ಲಿ ಆಗುವುದು ನಮ್ಮೆಲ್ಲರ ಪರಮ ಸೌಭಾಗ್ಯ.. ಚಾತುರ್ಮಾಸ ಜೀವನ ಕಲ್ಯಾಣದ ಸರ್ವಶ್ರೇಷ್ಠ ಸಮಯ… ಈ ದಿನಗಳಲ್ಲಿ ನಾವು ಹೆಚ್ಚು ಧರ್ಮ ಆರಾಧನೆ ಮಾಡಿ ನಮ್ಮ ಪಾಪಗಳನ್ನು ತೊಳೆಯುವ ಸುಂದರ ಸಮಯ…
ಜೈನ ಸಮಾಜದ ಮಹಿಳೆಯರು.. ಹೆಣ್ಣು ಮಕ್ಕಳು.. ಪುಟಾಣಿ ಮಕ್ಕಳು ಅನೇಕ ಸುಂದರ ಕಾರ್ಯಕ್ರಮದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು…
ಸಂಘದ ನಿಕಟಪೂರ್ವ ಅಧ್ಯಕ್ಷರಾದ ಮಹಾವೀರ ಬೋಹಾರ ರವರು ಎಲ್ಲಾ ಅತಿಥಿಗಳಿಗೆ ಸ್ವಾಗತ ಕೋರಿದರು..
ಕಾರ್ಯಕ್ರಮದ ನಿರೂಪಣೆ ಸಂಘದ ಕಾರ್ಯದರ್ಶಿ ಚೇತನ್ ಬೋಹಾರ* ನೆರವೇರಿಸಿದರು.. ಈ ಕಾರ್ಯಕ್ರಮದಲ್ಲಿ ಬೆಂಗಳೂರು,ಹಾಸನ, ಬಾಣವಾರ ,ತಿಪಟೂರು.. ಕಡೂರು, ಕೊಲ್ಹಾಪುರ್.. ಚೆನ್ನೈ ಗುಜರಾತ್..ರಾಜಸ್ಥಾನ್* ಹಾಗೂ ಅನೇಕ ನಗರದಿಂದ ಭಕ್ತರು ಪಾಲ್ಗೊಂಡಿದ್ದರು…
ಸಂಘದ ಸದಸ್ಯರಾದ ಆನಂದ್ ಜೈನ್, ಮದನ್ ಲಾಲ್, ಸುರೇಶ್, ಮದನ್, ಮೋಹನ್ ಲಾಲ್, ಸಜ್ಜನ್ ಚೋಪ್ರಾ…
ಯುವ ಅಧ್ಯಕ್ಷ ಪುನೀತ್, ವಿನೋದ್ ಜೈನ್, ರಾಹುಲ್, ಸುನಿಲ್ ಚೋಪ್ರಾ, ನರೇಶ್, ಜಿತೇಂದ್ರ, ಕಮಲೇಶ್, ಭರತ ಸಮಾಜದ ಮುಖಂಡರು ಉಪಸ್ಥಿತರಿದ್ದರು