ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್, ಶಾಸಕನ ಪುತ್ರ ಅರೆಸ್ಟ್
Hyderabad Gang-Rape: AIMIM MLA's Son Arrest

ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂನ ಶಾಸಕನ ಪುತ್ರನನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಹಲವು ದಿನಗಳಿಂದ ಸಾಕಷ್ಟು ಹೋರಾಟಗಳು ಹಾಗೂ ರಾಜಕೀಯ ತಲ್ಲಣಗಳ ನಡುವೆ ಕಳೆದ ರಾತ್ರಿ ಶಾಸಕನ ಪುತ್ರನನ್ನು ಬಂಧಿಸಲಾಗಿದೆ.
ಆತ ಅಪ್ರಾಪ್ತನಾದ್ದರಿಂದ ಈತನ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಐವರು ಕೂಡ ಅಪ್ರಾಪ್ತರು ಎಂದು ಹೇಳಲಾಗುತ್ತಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ಪೊಲೀಸರಿಗೆ ಹೊಸ ಸವಾಲಾಗಿದೆ. ಬಂಧಿತನಾಗಿರುವ ಶಾಸಕನ ಪುತ್ರನ ಮೇಲೆ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಹೇಳಿದ್ದಾರೆ.
ಈತ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ. ಆದರೆ, ಆ ಗ್ಯಾಂಗ್‍ನಲ್ಲಿ ಈತನಿದ್ದ ಎಂದು ಅವರು ಹೇಳಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸರ್ಕಾರಿ ಇನೋವಾ ವಾಹನ ಎಂದು ಕೂಡ ಈಗ ಬಹಿರಂಗಗೊಂಡಿದ್ದು, ತನಿಖೆ ಆಳವಾಗಿ ನಡೆದರೆ ಮತ್ತಷ್ಟು ಗೋರ ಕೃತ್ಯಗಳು ಹೊರ ಬರಲಿದೆ ಎಂದು ಕೆಲವು ಹೋರಾಟಗಾರರು ಹೇಳುತ್ತಿದ್ದಾರೆ. ಪೊಲೀಸರು ಕೂಡ ಈಗ ಒತ್ತಡದಲ್ಲಿದ್ದು, ಅಪ್ರಾಪ್ತರ ವಿಚಾರಣೆ ತೀವ್ರಗೊಳಿಸಿದ್ದಾರೆ.