ಅಧಿಕೃತವಾಗಿ ‘ಬಿಗ್ ಬಾಸ್’ ಗೃಹ ಪ್ರವೇಶಿಸಿದ 18 ಸ್ಪರ್ಧಿಗಳ ಪಟ್ಟಿ

ಪ್ರವೀಣಯರು ಯಾರು? ನವೀನರು ಯಾರು?‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಅದ್ಧೂರಿಯಾಗಿ ಆರಂಭಗೊಂಡಿದೆ.
ಸಂಜೆ 6 ಗಂಟೆಗೆ ಸರಿಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆ ಪ್ರಸಾರ ಶುರುವಾಯಿತು.
ಸೀನಿಯರ್ಸ್ ಹಾಗೂ ಹೊಸಬರ ನಡುವಿನ ಹಣಾಹಣಿ ಆಗಿರುವ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 9 ಮಂದಿ ಸೀನಿಯರ್ಸ್ (ಈ ಹಿಂದಿನ ಸೀಸನ್‌ಗಳಲ್ಲಿ ಸ್ಪರ್ಧಿಸಿದವರು) ಇದ್ದರೆ, 9 ಮಂದಿ ಹೊಸಬರು ಇದ್ದಾರೆ.
ಹಾಗಾದ್ರೆ, ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿರುವ ಪ್ರವೀಣರು (ಸೀನಿಯರ್ಸ್) ಯಾರು? ನವೀನರು (ಹೊಸಬರು) ಯಾರ್ಯಾರು ಅಂದ್ರಾ? ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ..
ಬಿಗ್ ಬಾಸ್’ ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿ ಅರುಣ್ ಸಾಗರ್
ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಎರಡನೇ ಸ್ಪರ್ಧಿ ಮಯೂರಿ
ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಮೂರನೇ ಸ್ಪರ್ಧಿ ದೀಪಿಕಾ ದಾಸ್
ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ನಾಲ್ಕನೇ ಸ್ಪರ್ಧಿ ನವಾಜ್
ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಐದನೇ ಸ್ಪರ್ಧಿ ದಿವ್ಯಾ ಉರುಡುಗ
ಕಿರುತೆರೆ ನಟ, ಉದ್ಯಮಿ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇವರು ಮನೆಯೊಳಗಿನ ಹ್ಯಾಂಡ್ಸಂ & ಕೂಲ್ ಹೀರೋ
ಪ್ರಶಾಂತ್ ಸಂಬರ್ಗಿ ಮತ್ತೊಮ್ಮೆ ಮನೆಯೊಳಗೆ ಪ್ರವೇಶಿಸಿದ್ದು ಇಲ್ಲಿಯವರೆಗೂ ಎಲ್ಲವೂ ಸಮಾಧಾನವಾಗಿಯೇ ನಡೆದುಕೊಂಡುಬಂದಿದೆ.
ಕಮಲಿ ಧಾರವಾಹಿ ಖ್ಯಾತಿಯ ಅಮೂಲ್ಯ ಗೌಡ ಕೂಡಾ ಮನೆಯೊಳಗೆ ಬಂದಿದ್ದು ಎಷ್ಟು ದಿನ ಮನೆಯೊಳಗೆ ಉಳಿದುಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ವಿನೋದ್ ಗೊಬ್ಬರಗಲ ಅವರು ಕಿರುತೆರೆಯ ಕಾಮಿಡಿ ಕಾರ್ಯಕ್ರಮಗಳ ಮನೆ ಮಾತಾಗಿದ್ದಾರೆ.
ಸೀರಿಯಲ್ ಹಾಗೂ ರಿಯಾಲಿಟಿ ಶೋ ಮೂಲಕ ಫೇಮಸ್ ಆದ ನಟಿ ನೇಹಾ ಗೌಡ ಕೂಡಾ ಮನೆಯೊಳಗೆ ಕಾಲಿಟ್ಟಿದ್ದಾರೆ.
ಬಿಗ್ಬಾಸ್ ಒಟಿಟಿ ಖ್ಯಾತಿಯ ಸಾನ್ಯ ಅಯ್ಯರ್ ಈಗ ಬಿಗ್ಬಾಸ್ ಸೀಸನ್ 9ಕ್ಕೆ ಕಾಲಿಟ್ಟಿದ್ದು ರೂಪೇಶ್ ಶೆಟ್ಟಿ ಜೊತೆಗಿನ ಇವರ ಸಂಬಂಧ ಚರ್ಚೆಯಲ್ಲಿದೆ.
ರೂಪೇಶ್ ಶೆಟ್ಟಿ ಬಿಗ್ಬಾಸ್ ಒಟಿಟಿಯಲ್ಲಿ ಚೆನ್ನಾಗಿ ಆಡಿದ್ದರು. ಈಗ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸುತ್ತಿದ್ದು ಎಷ್ಟು ದಿನ ಉಳಿಯಲಿದ್ದಾರೆ ಎಂದು ಕಾದುನೋಡಬೇಕಿದೆ.
ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದು ಈಗ ಬಿಗ್ಬಾಸ್ ಮನೆಯೊಳಗೆ ಸೇರಿದ್ದಾರೆ.
ರಾಕೇಶ್ ಅಡಿಗ ಅವರು ಬಿಗ್ ಬಾಸ್ ಮನೆಗೆ ಬಂದಿದ್ದು ಇವರು ಕೂಡಾ ಬಿಗ್ ಬಾಸ್ ಒಟಿಟಿಯಿಂದ ಟಿವಿಗೆ ಬಂದಿದ್ದಾರೆ.
ಐಶ್ವರ್ಯಾ ಅವರು ಲೇಡಿ ಬೈಕರ್. ಸೂಪರ್ ಆಗಿ ರೇಸಿಂಗ್ ಮಾಡುವ ಇವರು ಈ ಬಾರಿ ಮನೆಯೊಳಗೆ ಪ್ರವೇಶಿಸಿದ್ದಾರೆ.
ಮಂಗಳ ಗೌರಿ ಮದುವೆ ಧಾರವಾಹಿ ಮೂಲಕ ಖ್ಯಾತಿ ಪಡೆದ ಕಾವ್ಯಶ್ರೀ ಗೌಡ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.
ಅಕ್ಕ ಧಾರವಾಹಿ ಮೂಲಕ ಜನರ ಮನ ಸೆಳೆದ ಈಗ ನಿರೂಪಕಿಯಾಗಿ ಮಿಂಚುತ್ತಿರುವ ಅನುಪಮಾ ಗೌಡ ಬಿಗ್ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.