ಅಣ್ಣ ತಮ್ಮನನ್ನು ಭೀಕರವಾಗಿ ಕೊಂದ ಮನೆ ಕೆಲಸದವನು!

NCIB: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೇರಹಳ್ಳಿ ಗ್ರಾಮದಲ್ಲಿ ಹಣದ ವ್ಯವಹಾರ ಹಿನ್ನೆಲೆ ಅಣ್ಣ ತಮ್ಮಂದಿರನ್ನು ಅವರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಆಳು ಭೀಕರವಾಗಿ ಕೊಲೆಗೈದ ಘಟನೆ ಯೋಂದು ಮುಗಿಲು ಮುಟ್ಟಿದೆ. ಇನ್ನು ಕೊಲೆಯಾದವರನ್ನು ಮಾಂತೇಶ್ ಮಾಚನಹಳ್ಳಿ (28) ಫಕಿರೇಶ್ ಮಾಚನಹಳ್ಳಿ(17) ಎಂದು ಪೊಲೀಸರು ಹೇಳಿದ್ದಾರೆ. ಮಂಜುನಾಥ್ ದೆಸಳ್ಳಿ(38) ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗಿದೆ ಈತ ಇವರ ಮನೆಯಲ್ಲೇ ಕೆಲಸಕ್ಕೂ ಇದ್ದ ಎಂದು ವರದಿಯಲ್ಲಿ ತಿಳಿಸಿದೆ.ಬೆಳಗ್ಗಿನ ಜಾವ ಇಬ್ಬರು ಅಣ್ಣ ತಮ್ಮಂದಿರು ಮಲಗಿದ್ದ ವೇಳೆ ಈ ಕೃತ್ಯ ವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಯ ಬಳಿಕ ಆರೋಪಿ ಊರವರಿಗೆ ಧಮ್ಮಿ ಹಾಕಿ ಪರಾರಿಯಾಗಲು ಯತ್ತಿದ್ದ ಎಂದು ಹೇಳಲಾಗುತ್ತಿದೆ. ಬಳಿಕ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್.ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದರ ಹೆಚ್ಚಿನ ಮಾಹಿತಿ ತನಿಖೆ ಇಂದಷ್ಟೇ ತಿಳಿಯಬೇಕಿದೆ.