ರಾಜ್ಯ

ಅಜೀವ ಸದಸ್ಯ ಪ್ರತಿಯೊಬ್ಬ ಕುರುಬರು ಪಡೆಯಬೇಕು: ಪಟೇಲ್ ಶಿವಪ್ಪ

ಅರಸೀಕೆರೆ ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾನ್ಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ಪಟೇಲ್ ಶಿವಪ್ಪನವರು ಮಾತನಾಡಿ ಹಾಸನ ಜಿಲ್ಲೆಯ ಕುರುಬ ಸಮುದಾಯದ ಪ್ರತಿಯೊಬ್ಬರು ಹೊಸ ಸದಸ್ಯತ್ವ ಪಡೆಯುವ ಮುಖೇನ ನೋಂದಣಿಯಾಗಬೇಕು, ಇದು ಪ್ರತಿಯೊಬ್ಬ ಕುರುಬರ ಹಕ್ಕು, ನೊಂದಣಿಯಾದ ಪ್ರತಿಯೊಬ್ಬರ ಹಣವು ಪ್ರತ್ಯೇಕವಾದ ಖಾತೆಗೆ ಜಮಾವಾಗುವುದು, ಅರಸೀಕೆರೆ ತಾಲ್ಲೂಕಿನಲ್ಲಿ ಸುಮಾರು 35 ಸಾವಿರ ಜನಸಂಖ್ಯೆ ಇದ್ದು ಸಮುದಾಯದ ಮುಖಂಡರು ಹಾಗೂ ಯುವಕರು ಈ ಜವಾಬ್ದಾರಿಯನ್ನು ತೆಗೆದುಕೊಂಡು ಪ್ರತಿಯೊಬ್ಬರು ನೊಂದಣಿಯಾದರೆ ಮಾತ್ರ ಮುಂದಿನ ದಿನಗಳಲ್ಲಿ ನಾವುಗಳು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಶಕ್ತಿಪ್ರದರ್ಶನ ಮಾಡಲು ಸಾಧ್ಯ ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಸಾಕಷ್ಟು ಹಿರಿಯರ ತ್ಯಾಗದಿಂದ ಸಮುದಾಯ ಭವನಗಳು ಜಾರಿಗೆ ಬಂದಿವೆ, ಹಾಸನ ನಗರದ ಎಂ.ಜಿ ರಸ್ತೆಯಲ್ಲಿ ಕನಕ ಭವನ, ಅರಸೀಕೆರೆಯ ಗಂಗೆ ಮಡು ಸಾಕಷ್ಟು ಜನಗಳ ಪರಿಶ್ರಮದಿಂದ ಕಾರ್ಯಗತವಾಗಿದೆ ಎಂದರು.

ಬಾಣಾವರದ ಗ್ರಾ ಪಂ ಮಾಜಿ ಅಧ್ಯಕ್ಷರಾದ ಶ್ರೀ ಜಯಣ್ಣ ಮಾತನಾಡಿ ಹಿಂದೆ ನಾವುಗಳೆಲ್ಲರೂ ಸಂಘಕ್ಕೆ ನೊಂದಣಿಯಾಗಿದ್ದೆವು ಆದರೆ ಅದರ ಲೆಕ್ಕ ಪತ್ರವೇ ಇಲ್ಲದಂತಾಗಿದೆ. ಇದರ ಜವಾಬ್ದಾರಿ ಯಾರು ಹೊರುತ್ತಾರೆ, ಅದೇನೇ ಇರಲಿ ಮಾನ್ಯ ಶಿವಪ್ಪನವರ ಆದೇಶದಂತೆ ನಾವುಗಳೆಲ್ಲರೂ ಹೊಸ ನೋಂದಣಿ ಮಾಡುತ್ತೇವೆ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತವಾಗಿ ನಾವುಗಳು ಸಮುದಾಯವನ್ನು ಕೊಂಡೊಯ್ಯಬೇಕಾಗಿದೆ ಎಂದರು.

ಸಮುದಾಯದ ಮುಖಂಡರುಗಳಾದ ಜಿ.ಪಂ ಮಾ ಅ ಶ್ರೀ ಹುಚ್ಚೇಗೌಡರು, ಜಿ. ಪಂ ಮಾ ಉ ಅ ಹಾಗು ಆಲಿ ಸದಸ್ಯರಾದ ಶ್ರೀ ಚೌಡಯ್ಯನವರು, ಕರವೇ ನಗರ ಅಧ್ಯಕ್ಷರಾದ ಲಕ್ಷ್ಮೀಶ್, ಜಿ. ಪಂ ಮಾ ಉ ಶ್ರೀಮತಿ ಪ್ರೇಮಮ್ಮ, ಬಿಜೆಪಿ ಮುಖಂಡ ಪುರುಷೋತ್ತಮ್, ಜೆಡಿಎಸ್ ಮುಖಂಡ ತಿಮ್ಮಪ್ಪನಹಳ್ಳಿ ಮನು, ತ.ಪಂ ಮಾ ಅಧ್ಯಕ್ಷರಾದ ಜಗದೀಶ್, ಸಂ.ಪ.ಸ.ಸಂ ಅಧ್ಯಕ್ಷರಾದ ಬೆಲವತ್ತಳ್ಳಿ ನಟರಾಜ್, ಬಿಜೆಪಿ ಮುಖಂಡ ಮಂಜೇಶ್, ಶ್ರೀಮತಿ ರಾಧಾ ಅವಿನಾಶ್ ಹಾಗೂ ಮಹೇಶ್ ಪ್ರತಿಯೊಬ್ಬರು ಹೊಸ ನೋಂದಣಿಯನ್ನು ಮಾಡಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಮುಖಂಡರಾದ ಮಂಗಳಾಪುರ ನಾಗರಾಜ್, ತಮ್ಮಣ್ಣಗೌಡರು, ಮಡಿಕಲ್ ಸೋಮಣ್ಣ, ಮಂಜಣ್ಣ,
ನಗರಸಭೆ ಸದಸ್ಯರಾದ ಈಶ್ವರಪ್ಪ, ಅ ಪ ಸಹಕಾರ ಸಂಘದ ಶ್ರೀಮತಿ ಸುಧಾ ಮಂಜುನಾಥ್, ಲಕ್ಷ್ಮಮ್ಮ,
ಗ್ರಾ ಪಂ ಸ ಲಾಯಲಪುರ ಚಂದ್ರೇಗೌಡರು, ಕರವೇ ರಾಜು, ರವಿ ಹಾಗೂ ಹಲವಾರು ಸಮುದಾಯದ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button