
ಅಗ್ನಿಪಥ್ ಸೇನಾ ನೇಮಕಾತಿ ನಿಯಮ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ತಣಿಸಲು ಕೇಂದ್ರ ಸರ್ಕಾರ ನಾನಾ ರೀತಿಯ ಕಸರತ್ತು ನಡೆಸಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಅಸ್ಸಾಂ ರೈಫಲ್ಸ್ ನೇಮಕಾತಿಗಳಲ್ಲಿ ಅಗ್ನಿವೀರ್‍ಗೆ ಶೇ.10 ಮೀಸಲಾತಿ ನೀಡುವುದಾಗಿ ಘೋಷಿಸಿದೆ.
ಸಶಸ್ತ್ರ ಪಡೆಗಳಲ್ಲಿ ಸೈನಿಕರನ್ನು ಅಲ್ಪಾವಧಿ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಇತ್ತೀಚೆಗೆ ಅಗ್ನಿಪಥ್ ಯೋಜನೆಯನ್ನು ಘೋಷಿಸಲಾಗಿದೆ.
ಈ ರೀತಿ ನೇಮಕಗೊಂಡ ಸೈನಿಕರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ.
ನಾಲ್ಕು ವರ್ಷಗಳ ಬಳಿಕ ಸೇನೆಯಿಂದ ನಿವೃತ್ತಿ ಹೊಂದುವ ಅಗ್ನಿವೀರರಿಗೆ ಕೇಂದ್ರ ಸರ್ಕಾರದ ವಿವಿಧ ಸಶಸ್ತ್ರ ಮೀಸಲು ಪಡೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವಾಗಿ ಆದ್ಯತೆ ನೀಡುವುದಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
CAPF, ಅಸ್ಸಾಂ ರೈಫಲ್ಸ್‍ನಲ್ಲಿ ಅಗ್ನಿವೀರ್‍ಗಳಿಗಾಗಿ 10 ಖಾಲಿ ಹುದ್ದೆಗಳನ್ನು ಕಾಯ್ದಿರಿಸಲು ನಿರ್ಧರಿಸಿದೆ ಎಂದು ಗೃಹ ಸಚಿವರ ಕಚೇರಿ ಟ್ವೀಟ್‍ನಲ್ಲಿ ತಿಳಿಸಿದೆ.
ಅಗ್ನಿವೀರರಿಗಾಗಿ CAPF ಮತ್ತು ಅಸ್ಸಾಂ ರೈಫಲ್ಸ್‍ನಲ್ಲಿ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಯನ್ನು ಗೃಹ ಸಚಿವಾಲಯ ಘೋಷಣೆ ಮಾಡಿದೆ.
ಅಗ್ನಿವೀರ್‍ನ ಮೊದಲ ಬ್ಯಾಚ್‍ಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿ ಮೀರಿ 5 ವರ್ಷಗಳವರೆಗೆ ಸಡಿಲಿಕೆ ಘೋಷಿಸಲಾಗಿದೆ. ನಂತರದಲ್ಲಿ ಗರಿಷ್ಠ ವಯಸ್ಸಿನ ಮಿತಿ ಮೀರಿ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲು ನಿರ್ಧರಿಸಲಾಗಿದೆ.