ಅಕ್ರಮ ವಲಸಿಗರಿಗೆ ನಕಲಿ ಆಧಾರ್ ನೀಡುತ್ತಿದ್ದ ಜಾಲ ಪತ್ತೆ, 9 ಮಂದಿ ಅಂದರ್
Fake Aadhaar illegal immigrant 9 arrested

ಅಕ್ರಮ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ಪೂರೈಸುತ್ತಿದ್ದ ಜಾಲವೊಂದನ್ನು ಭೇದಿಸಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಾಂಗ್ಲಾದೇಶದ ಮೂವರು ಪ್ರಜೆಗಳು ಸೇರಿದಂತೆ 9ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸೈದುಲ್ ಅಕೂನ್ ಅಲಿಯಾಸ್ ಶಾಯೀದ್ ಅಹಮ್ಮದ್, ಅಬ್ದುಲ್ ಅಲೀಂ, ಸುಹೇಲ ಅಹಮ್ಮದ್, ಮೊಹಮ್ಮದ್ ಇದಾಯತ್, ಸೈಯದ್ ಮನ್ಸೂರ್, ಆಯಿಷಾ ಅಲಿಯಾಸ್ ರಬಿಯಾ, ಮೊಹಮ್ಮದ್ ಅಮೀನ್ ಸೇಠ್, ರಾಕೇಶ್, ಇಸ್ತಿಯಾಕ್ ಪಾಷ ಬಂಧಿತರು..ಬಂಧಿತರ ಪೈಕಿ ಒಬ್ಬgು ಸಾಫ್ಟ್‍ವೇರ್ ಇಂಜಿನಿಯರ್ ಹಾಗೂ ಒಬ್ಬರು ಫಾರ್ಮಸಿಸ್ಟ್ ಸೇರಿದ್ದಾರೆ.
ಏ.15ರಂದು ಬೆಳಗ್ಗಿನ ಜಾವ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಚಿಕ್ಕಗೊಲ್ಲರಹಟ್ಟಿ ಗ್ರಾಮದ ಎಸ್‍ಬಿಐ ಎಟಿಎಂ ಮಿಷನ್ ಕಳವು ಮಾಡಿ 18 ಲಕ್ಷ ದೋಚಿದ್ದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾಗ ಬಾಂಗ್ಲಾ ದೇಶದ ಪ್ರಜೆಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.ಆರೋಪಿಗಳಿಗೆ ಸ್ಥಳೀಯವಾಗಿ ಸಹಾಯ ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಾಂಗ್ಲಾ ದೇಶದ ಪ್ರಜೆ ಶೇಕ್‍ಇಸ್ಮಾಯಿಲ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬಾಂಗ್ಲಾದೇಶದಿಂದ ಭಾರತಕ್ಕೆ ತ್ರಿಪುರ ಗಡಿ ಮುಖಾಂತರ ಅಕ್ರಮವಾಗಿ ನುಸುಳಿ ಬಂದಿರುವುದಾಗಿ ತಿಳಿಸಿದ್ದಾನೆ.
ನಕಲಿ ದಾಖಲೆ ಸೃಷ್ಟಿಸಿ ನಗರ ವ್ಯಾಪ್ತಿಯಲ್ಲಿ ಸ್ಥಳೀಯ ವಿಳಾಸದ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾಡಿಕೊಂಡು ಪ್ಲ್ಯಾಸ್ಟಿಕ್ ಮತ್ತು ಇತರೆ ಸ್ಕ್ರಾಪ್ ಸಂಗ್ರಹಣೆ ಮಾಡಿ ಎನ್‍ಎ ಪ್ಲ್ಯಾಸ್ಟಿಕ್ ಎಂಬ ಹೆಸರಿನಲ್ಲಿ ಕಂಪೆನಿಯನ್ನು ನಡೆಸುತ್ತಿರುವ ಸೈದುಲ್ ಅಕೂನ್ ಅಲಿಯಾಸ್ ಶಾಯಿದ್ ಅಹಮ್ಮದ್ ತನ್ನ ಬ್ಯಾಂಕ್ ಖಾತೆಗಳಿಂದ ಏಜೆಂಟ್ ಮುಖಾಂತರ ಬಾಂಗ್ಲಾದೇಶಕ್ಕೆ ಭಾರತದ ರೂಪಾಯಿಯನ್ನು ಸ್ಥಳೀಯ ಟಾಕಾ ಕರೆನ್ಸಿಯಾಗಿ ಪರಿವರ್ತಿಸಿ ವರ್ಗಾವಣೆ ಮಾಡುತ್ತಿದ್ದಾರೆಂದು ಬಾಯ್ಬಿಟ್ಟಿದ್ದಾನೆ.
ಈತನ ಮಾಹಿತಿ ಮೇರೆಗೆ ಬಾಂಗ್ಲಾದೇಶದ ಪ್ರಜೆ ಸೈದುಲ್ ಅಕೂನ್ ಮತ್ತು ಆತನ ಮಗ ಸುಮನ್ ಇಸ್ಲಾಮ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸ್ಥಳೀಯವಾಗಿ ನೆಲೆಸಲು ಆಧಾರ್‍ಕಾರ್ಡ್‍ಗಳನ್ನು ಇವರು ಹೊಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಿದಾಗ ನಗರದ ಸುತ್ತಮುತ್ತ ಬಂದು ನೆಲೆಸಿರುವ ಬಾಂಗ್ಲಾ ದೇಶಿಯರಿಗೆ ಆಧಾರ್‍ಕಾರ್ಡ್‍ಗಳನ್ನು ಬಿಬಿಎಂಪಿ ವೈದ್ಯಾಕಾರಿಗಳ ಮೊಹರು ಹಾಗೂ ನಕಲಿ ಲೆಟರ್‍ಹೆಡ್‍ಗಳನ್ನು ಸೃಷ್ಟಿಸಿ ಬೆಂಗಳೂರು ಒನ್ ಸೆಂಟರ್‍ಗೆ ನೀಡಿ ಅಲ್ಲಿ ಆಧಾರ್‍ಕಾರ್ಡ್ ಪಡೆದಿರುವುದು ತನಿಖಾ ಕಾಲದಲ್ಲಿ ಗೊತ್ತಾಗಿದೆ.
ಈ ಸಂಬಂಧ ದೆಹಲಿ ಹಾಗೂ ಬೆಂಗಳೂರು ವಿಳಾಸ ಹೊಂದಿರುವ ಮೊಹಮ್ಮದ್ ಅಬ್ದುಲ್ ಅಲೀಂ ಎಂಬಾತನನ್ನು ಬಂಸಿ ಆತನ ಮುಖಾಂತರ ನಕಲಿ ಲೆಟರ್‍ಹೆಡ್‍ಗಳನ್ನು ತಯಾರಿಸಿಕೊಡುತ್ತಿದ್ದ ಹಾಗೂ ಬಿಬಿಎಂಪಿ ವೈದ್ಯಾಕಾರಿಗಳ ಸೀಲ್ ಇಟ್ಟುಕೊಂಡು 500ರಿಂದ 1000 ರೂ.ಗಳಿಗೆ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಸ್ಥಳೀಯ ನಿವಾಸಿಗಳಾದ ಸಾಫ್ಟ್‍ವೇರ್ ಇಂಜಿನಿಯರ್ ಬಿಬಿಎಂಪಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ನೌಕರರಾಗಿ ಕೆಲಸ ಮಾಡುವ ಫಾರ್ಮಸಿಸ್ಟ್, ಮಹಿಳಾ ಬ್ರೋಕರ್ ಸೇರಿ 9 ಮಂದಿಯನ್ನು ಬಂಸಲಾಗಿದೆ.
ಆರೋಪಿಗಳಿಂದ ಬೌರಿಂಗ್, ವಾಣಿವಿಲಾಸ ಸೇರಿದಂತೆ ನಗರದ ವಿವಿಧ ಬಿಬಿಎಂಪಿಯ ಆರೋಗ್ಯ ಕೇಂದ್ರಗಳ ವೈದ್ಯಾಕಾರಿಗಳ 5 ಸೀಲ್, 26 ನಕಲಿ ಲೆಟರ್‍ಹೆಡ್, ಸೀಲ್ ತಯಾರು ಮಾಡುವ ಯಂತ್ರ, 16 ಮೊಬೈಲ್, 3 ಸಿಪಿಯು, 2 ಲ್ಯಾಪ್‍ಟಾಪ್, 2 ಪ್ರಿಂಟರ್, 31 ಆಧಾರ್ ಕಾರ್ಡ್‍ಗಳು, 13 ಪಾನ್ ಕಾರ್ಡ್‍ಗಳು, 28 ವೋಟರ್ ಐಡಿಗಳು, 4 ಈ-ಶ್ರಮ್ ಕಾರ್ಡ್‍ಗಳು, 5 ಡೈವಿಂಗ್ ಲೈಸೆನ್ಸ್, 3 ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, 2 ಎಟಿಎಂ ಕಾರ್ಡ್‍ಗಳು, 3 ವೋಟರ್ ಐಡಿ ಅಪ್ಲಿಕೇಷನ್ ಫಾರಂ, 92 ಬಿಬಿಎಂಪಿ ಮೆಡಿಕಲ್ ಆಫೀಸರ್‍ಗಳ ಸೀಲು, ಸಹಿ ಇರುವ ಸರ್ಟಿಫಿಕೇಟ್ ಫಾರ್ ಆಧಾರ್ ಎನ್‍ರೋಲ್‍ಮೆಂಟ್ ಫಾರಂಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ. ಪ್ರಮುಖ ಆರೋಪಿ ಎಸ್‍ಬಿಐ ಹಾಗೂ ಆಕ್ಸಿಸ್ ಬ್ಯಾಂಕ್‍ಗಳಲ್ಲಿ 3 ಖಾತೆಗಳನ್ನು ಹೊಂದಿದ್ದು, ಈ ಖಾತೆಗಳಲ್ಲಿ ಒಂದು ವರ್ಷದ ಅವಯಲ್ಲಿ ಸುಮಾರು 4 ಕೋಟಿಗೂ ಹೆಚ್ಚು ಹಣದ ವ್ಯವಹಾರ ನಡೆಸಿರುವುದು ತನಿಖಾ ಕಾಲದಲ್ಲಿ ತಿಳಿದುಬಂದಿರುತ್ತದೆ. ಈ ಖಾತೆಗಳಿಗೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪ್ರಜೆಗಳಿಂದ ಭಾರತೀಯ ರೂಪಾಯಿ ಮುಖಾಂತರ ಹಣ ಪಡೆದು ಕೋಲ್ಕತ್ತಾ, ಚೆನ್ನೈ ಹಾಗೂ ಪಂಜಾಬ್‍ಗಳಲ್ಲಿ ನೆಲೆಸಿರುವವರ ಬ್ಯಾಂಕ್ ಖಾತೆಗಳ ಮುಖಾಂತರ ಹಣವನ್ನು ವರ್ಗಾಯಿಸಿಕೊಂಡಿರುವುದು ಕಂಡುಬಂದಿದೆ.
ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ವ್ಯಾಪಾರ ಮಾಡುವವರ ಮುಖಾಂತರ ಬಾಂಗ್ಲಾದೇಶಕ್ಕೆ ಹಣ ವರ್ಗಾವಣೆ ಮಾಡುತ್ತಿದುದು ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆಯ ಒಟ್ಟು 13 ಬ್ಯಾಂಕ್ ಖಾತೆಗಳನ್ನು ತನಿಖೆ ಸಂಬಂಧ ಫ್ರೀಜ್ ಮಾಡಿಸಿದ್ದು, ಹಣ ವರ್ಗಾವಣೆ ಪಡೆದಿರುವವರ ವಿವರ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶದ ವಲಸಿಗರನ್ನು ಆನೇಕಲ್ ಉಪವಿಭಾಗದ ಪೊಲೀಸರು ಪತ್ತೆಹಚ್ಚಿದ್ದು, ಐವರನ್ನು ವಶಕ್ಕೆ ಪಡೆದಿದ್ದಾರೆ.