ಅಪರಾಧ

ಅಕೌಂಟ್‌ಗೆ 23 ಲಕ್ಷ ಬಂತು…ನಿಮಿಷದಲ್ಲೇ ಹೋಯ್ತು!…ಈಗ ಇವರು 23 ಲಕ್ಷ ಸಾಲ ತೀರಿಸಬೇಕು!

ಆನ್‌ಲೈನ್ ಪ್ರಪಂಚದಲ್ಲಿ ಒಂದೊಂದು ತಪ್ಪು ಎಷ್ಟು ಕಷ್ಟ ತಂದೊಡ್ಡುತ್ತವೆ ಎಂಬುದನ್ನು ಸೈಬರ್ ಕ್ರೈಂ ಘಟನೆಯೇ ಸಾಕ್ಷಿ. ಬೆಂಗಳೂರಿನಲ್ಲಿ ಖಾಸಾಗಿ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಗೆ 23 ಲಕ್ಷ ಸಂದಾಯವಾಗಿದೆ. ಹೀಗೆ ಹಣ ಸಂದಾಯವಾದ ಕೇವಲ ಐದು ನಿಮಿಷಗಳಲ್ಲಿ 8 ಲಕ್ಷ ರೂ. ಬೇರೊಂದು ವಂಚಕನ ಖಾತೆಗೆ ಟ್ರ್ಯಾನ್ಸಾಕ್ಷನ್ ಆಗಿದೆ.

ಇದನ್ನು ನೋಡಿ ಗಾಬರಿಯಾದ ಆ ವ್ಯಕ್ತಿ ತಕ್ಷಣವೇ ಅಕೌಂಟ್ ಬ್ಲಾಕ್ ಮಾಡಿ ಅನಾಹುತ ತಪ್ಪಿಸಿಕೊಂಡಿದ್ದಾರೆ. ಆದರೆ, ಆ ನಂತರ ಅವರಿಗೆ ತಿಳಿದುಬಂದಿದ್ದು, ತಾವು 23 ಲಕ್ಷ ಸಾಲ ತೀರಿಸಬೇಕು ಎಂಬುದು.

ಇಂತಹದೊಂದು ಘಟನೆ ನಡೆದಿದೆ ಎಂದರೆ ನೀವು ನಂಬದೇ ಇರಬಹುದು. ಆದರೆ, ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣವೊಂದು ಪೊಲೀಸರಿಗೂ ತಲೆನೋವಾಗಿದೆ.

ಹೌದು, ಸ್ಮಾರ್ಟ್‌ಫೋನನ್ನೇ ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ವರದಿಯಾಗಿದೆ. ಹ್ಯಾಕರ್‌ಗಳು ವ್ಯಕ್ತಿಯೋರ್ವರ ಸ್ಮಾರ್ಟ್‌ಫೋನನನ್ನು ಹ್ಯಾಕ್ ಮಾಡಿ ಅವರ ಸ್ಮಾರ್ಟ್‌ಫೋನ್ ಮೂಲಕವೇ 23 ಲಕ್ಷ ಲೋನ್ ತೆಗೆದುಕೊಂಡಿದ್ದಾರೆ.

ಆ ಲೋನ್ ಹಣ ಇವರ ಅಕೌಂಟ್‌ಗೆ ಜಮೆಯಾದ ತಕ್ಷಣವೇ ಸಂಪೂರ್ಣ ಹಣವನ್ನು ತಮ್ಮ ಅಕೌಂಟ್‌ಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಈ ವ್ಯಕ್ತಿ ಮುನ್ನೆಚ್ಚರಿಕೆ ವಹಿಸಿದ್ದರಿಂದ ಅವರಿಗೆ 23 ಲಕ್ಷದ ಬದಲಿಗೆ 8 ಲಕ್ಷ ರೂ. ವಂಚಿಸಲಾಗಿದೆ.

ಈ ಬಗ್ಗೆ ದೂರು ದಾಖಲಾದ ನಂತರ ಪೊಲೀಸರು ತನಿಖೆಗೆ ಇಳಿದಿದ್ದು, ಇದೊಂದು ದೊಡ್ಡ ವಂಚನೆಯ ಜಾಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ವಿಚಾರಣೆ ಹಂತದಲ್ಲಿರುವ ಈ ಘಟನೆಯನ್ನು ಪೊಲೀಸರು ‘ಸ್ಮಾರ್ಟ್‌ಫೋನ್ ಮಿರರ್ ಹ್ಯಾಕಿಂಗ್’ ಎಂದು ಊಹಿಸಿದ್ದಾರೆ.

ನೀವು ಬಳಸುತ್ತಿರುವ ಸ್ಮಾರ್ಟ್‌ಫೋನನ್ನು ಇನ್ನೆಲ್ಲೋ ಕುಳಿತ ಸೈಬರ್ ಕ್ರಿಮಿನಲ್ ಓರ್ವ ನಿಯಂತ್ರಿಸಬಹುದಾದ ಅಥವಾ ನಿಮ್ಮ ಚಟುವಟಿಕೆಗಳನ್ನು ವೀಕ್ಷಿಸಬಹುದಾದ ಪ್ರಕ್ರಿಯೆಗೆ ಸ್ಮಾರ್ಟ್‌ಫೋನ್ ಮಿರರ್ ಹ್ಯಾಕಿಂಗ್ ಎಂದು ಕರೆಯಲಾಗುತ್ತದೆ.

ಇದನ್ನು ಸುಲಭವಾಗಿ ಹೆಳಬೇಕೆಂದರೆ, ನೀವು ಎನಿಡೆಸ್ಕ್ ಅಪ್ಲಿಕೇಶನ್ ಬಳಸುವ ಮೂಲಕ ಒಂದು ಲ್ಯಾಪ್‌ಟಾಪ್ ಮೂಲಕ ಮತ್ತೊಂದು ಲ್ಯಾಪ್‌ಟಾಪ್ ಮೂಲಕ ನಿಯಂತ್ರಿಸಬಹುದು. ಇದೇ ರೀತಿಯ ಕಳ್ಳ ಅಪ್ಲಿಕೇಷನ್ ಸಹಾಯದಿಂದ ಸೈಬರ್ ಕ್ರಿಮಿನಲ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡುತ್ತಾರೆ.

ತಾವು ಹ್ಯಾಕ್ ಮಾಡಿದ ಸ್ಮಾರ್ಟ್‌ಫೋನ್ ಬಳಕೆದಾರ ಆ ಸ್ಮಾರ್ಟ್‌ಫೋನಿನಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ತಿಳಿಯುತ್ತಾರೆ. ಇದರಿಂದ ಅವರಿಗೆ ಬ್ಯಾಂಕಿಂಗ್ ಮಾಹಿತಿಗಳೆಲ್ಲವೂ ಸುಲಭವಾಗಿ ಸಿಗುವುದರಿಂದ ಜನರನ್ನು ವಂಚಿಸುತ್ತಾರೆ.ಈ ವಂಚನೆಯ ಜಾಲಕ್ಕೆ ಬಿದ್ದಿರುವ ವ್ಯಕ್ತಿಗೂ ಇದೇ ರೀತಿ ಆಗಿದೆ.

ಅಚಾನಕ್ ಆಗಿ ಡೌನ್‌ಲೋಡ್ ಮಾಡಿದ ಯಾವುದೋ ಒಂದು ಫೈಲ್ ಮೂಲಕ ಇವರ ಸ್ಮಾರ್ಟ್‌ಫೋನನ್ನು ಹ್ಯಾಕ್ ಮಾಡಲಾಗಿದೆ. ನಂತರ ಇವರು ಆನ್‌ಲೈನ್ ಬ್ಯಾಂಕಿಂಗ್ ಮಾಹಿತಿಗಳೆಲ್ಲವನ್ನು ತೆಗೆದುಕೊಂಡಿದ್ದಾರೆ. ಈ ವಂಚಿಸಲು ಮುಂದಾದರೆ ಇವರ ಖಾತೆಯಲ್ಲಿ ಕೇವಲ 200 ರೂ.

ಮಾತ್ರ ಇತ್ತು. ಆದರೆ, ಈ ವ್ಯಕ್ತಿಯ ಸಂಬಳ ಚೆನ್ನಾಗಿದ್ದುದ್ದರಿಂದ ಇವರಿಗೆ ‘ಇನ್‌ಸ್ಟಂಟ್ ಲೋನ್’ ಆಫರ್ ಇತ್ತು. ಇದನ್ನು ನೋಡಿದ ಕ್ರಿಮಿನಲ್‌ಗಳೇ ಆನ್‌ಲೈನಿನಲ್ಲಿ ಲೋನ್‌ಗೆ ಅಪ್ಲಿಕೇಷನ್ ಹಾಕಿದ್ದಾರೆ.! ಇವರಿಗೆ ಬರುವ ಓಟಿಪಿ ಎಲ್ಲವನ್ನೂ ಮೇಲ್‌ ಮುಖಾಂತರವೇ ನಿಯಂತ್ರಿಸಿದ್ದಾರೆ.

ಕೇವಲ ಐದು ನಿಮಿಷಗಳಲ್ಲಿ ಲೋನ್ ಸ್ಯಾಕ್ಷನ್ ಆಗಿದೆ.! ನಂತರ ಇನ್ನೇನು ಆ ತಕ್ಷಣವೇ ಹಣವನ್ನು ತಮ್ಮ ಅಕೌಂಟ್‌ಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ.23 ಲಕ್ಷ ಲೋನ್ ಹಣ ಇವರ ಅಕೌಂಟ್‌ಗೆ ಜಮೆಯಾದ ತಕ್ಷಣವೇ ಸಂಪೂರ್ಣ ಹಣವನ್ನು ತಮ್ಮ ಅಕೌಂಟ್‌ಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ.

ಈ ವೇಳೆ ಈ ವ್ಯಕ್ತಿ ಮುನ್ನೆಚ್ಚರಿಕೆ ವಹಿಸಿದ್ದರಿಂದ ಅವರಿಗೆ 23 ಲಕ್ಷದ ಬದಲಿಗೆ 8 ಲಕ್ಷ ರೂ. ವಂಚಿಸಲಾಗಿದೆ. ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತ ಆಗುತ್ತಿರುವ ಮೆಸೇಜ್‌ಗಳನ್ನು ನೋಡಿದ ಇವರು ತಕ್ಷಣವೇ ತಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ.( ಅವರ ಸ್ಮಾರ್ಟ್‌ಫೋನಿನಿಂದ ಬ್ಲಾಕ್ ಮಾಡಲು ಆಗಿಲ್ಲ.

ಇದಕ್ಕಾಗಿ ಮತ್ತೊಂದು ಸ್ಮಾರ್ಟ್‌ಫೋನಿನ ಸಹಾಯ ಪಡೆದಿದ್ದಾರೆ) ಆ ನಂತರ ಇ-ಮೇಲ್‌ಗಳನ್ನು ತೆರೆದು ನೋಡಿದಾಗ 23 ಲಕ್ಷ ರೂ.

ಸಾಲ ಪಡೆದಿರುವ ಬಗ್ಗೆ ಸಂದೇಶಗಳು ಬಂದಿವೆ. ಇದೀಗ ವಂಚನೆಯಾಗಿರುವ ಬಗ್ಗೆ ತಿಳಿದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣ ಇದೀಗ ವಿಚಾರಣೆಯ ಹಂತದಲ್ಲಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button