
ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಲೆಗಳಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಈಗಾಗಲೇ ಅಡುಗೆ ಅನಿಲ, ಖಾದ್ಯ ತೈಲ, ಬೇಳೆ ಕಾಳುಗಳ ಬೆಲೆ ಗಗನಕ್ಕೇರಿದ್ದು, ಈಗ ತರಕಾರಿಗಳ ಬೆಲೆ ಹೆಚ್ಚಳ ಜನ ಸಾಮಾನ್ಯರ ಮೇಲೆ ಭಾರೀ ಪರಿಣಾಮ ಬೀರಿದೆ.
ಅಕಾಲಿಕ ಮಳೆಯಿಂದಾಗಿ ಫಸಲು ನಾಶವಾಗಿದ್ದು ಹಾಗೂ ಹೆಚ್ಚಿನ ತಾಪಮಾನದಿಂದ ನಿರೀಕ್ಷಿತ ಬೆಳೆ ಕೈ ಸೇರಿದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಟೊಮ್ಯಾಟೊ ಕೆಜಿಗೆ 60ರಿಂದ 80 ರೂ., ಬೀನ್ಸ್ 70, ನಿಂಬಿಹಣ್ಣು ಒಂದಕ್ಕೆ 8ರಿಂದ 10ರೂ., ಕ್ಯಾರೆಟ್ 60ರೂ., ಹಾಗಲಕಾಯಿ 80ರೂ., ಬೀಟ್ರೋಟ್ 50ರೂ., ಬದನೆಕಾಯಿ 50, ಹಸಿ ಭಟಾಣಿ 150 ರೂ ಇದೆ. ಈರುಳ್ಳಿ ಮಾತ್ರ 100ರೂ.ಗೆ 6ರಿಂದ 7 ಕೆಜಿ ಲಭ್ಯವಾಗುತ್ತಿದೆ.