
( N ಮೂರ್ತಿ ಸ್ಥಾಪಿತ ) ದಲಿತ ಸಂಘರ್ಷ ಸಮಿತಿ( DSS)ಯ ವತಿಯಿಂದ ಇಂದು Dr B R ಅಂಬೇಡ್ಕರ್ ರವರ 131ನೇ ವರ್ಷದ ಜನ್ಮದಿನಾಚಾರಣೆ ಅದ್ಧುರಿಯಾಗಿ ಆಚರಿಲಾಯಿತು. ಸಮಾರಂಭಕ್ಕೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಸತೀಶ್ ರೆಡ್ಡಿರವರು ಅಂಬೇಡ್ಕರ್ರವರ ಪುಥಳ್ಳಿಕೆಗೆ ಮಾಲಾರ್ಪಣೆ ಮಾಡುವ ಮುಖೇನ ಚಾಲನೆಯನ್ನು ನೀಡಿದರು.. ಕಾರ್ಯಕ್ರಮದಲ್ಲಿ DSS ಜಿಲ್ಲಾ ಅಧ್ಯಕ್ಷರಾದ ಶ್ರೀ ಮುರುಗೇಶ್,DSS ಪ್ರಧಾನ ಕಾರ್ಯದರ್ಶಿಯಾದ ಶ್ರೀನಿವಾಸ್ ಮೂರ್ತಿ,ಅಲ್ಪಸಂಖ್ಯಾತ ಅಧ್ಯಕ್ಷರಾದ ಬೇಗೂರು ಅಬ್ದುಲ್,ಸಂಘಟನಾ ಕಾರ್ಯದರ್ಶಿ ಬಾಬುರಾಜ್, ದಲಿತ ಮುಖಂಡರಾದ ನಾಗಭೂಷಣ್, ಅಶೋಕ್, ಮಂಜು, ವಿಜಯ ಕುಮಾರ್,ಬಾಬು, ಸೀನ ಇತರು ಉಪಸ್ಥಿತರಿದ್ದರು.. ಸಮಾರಂಭವು 500 ದ್ವಿಚಕ್ರ ವಾಹನಗಳೊಂದಿಗೆ ಹೊರಟು ಬೊಮ್ಮನಹಳ್ಳಿ, ರೂಪೇನ ಅಗ್ರಹಾರ, ಮಂಗಮ್ಮನಪಾಳ್ಯ, ಗಾರ್ವೆ ಪಾಳ್ಯ ಮೂಲಕ ಹೊರಟು ಬಂಡೆಪಾಳ್ಯ ದಲ್ಲಿ ಕೊನೆಕೊಂಡಿತು.. ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ, ಕೇಕ್ ಕತ್ತರಿಸಿ, ಸಿಹಿ ತಿಂಡಿಯನ್ನು ಹಂಚಿ, ಅಂಬೇಡ್ಕರ್ ರವರ ಪ್ರತಿಮೆಗಳಿಗೆ ಪುಷ್ಪ ಮಾಲಾ ಹಾಕಲಾಗಿ, ಬಹಳ ಅದ್ಧುರಿಯಿಂದ ಹುಟ್ಟುಹಬ್ಬ ಆಚರಿಸಲಾಯಿತು.ಕೊನೆಯಲ್ಲಿ ಮಾತನಾಡಿದ ಅಬ್ದುಲ್ ಬೇಗೂರ್ ಅವರು ಇದು ಕೇವಲ ಒಂದು ದಿನದ ಸಂಭ್ರಮವಲ್ಲ ಪ್ರತಿದಿನ ಸಂವಿಧಾನವನ್ನು ಪ್ರೀತಿಸುವವರು ಅದನ್ನು ಪಾಲಿಸಿ ನಡೆಯುವವರು ಪ್ರತಿದಿನ ಅಂಬೇಡ್ಕರ್ ಜಯಂತಿಯನ್ನು ಮಾಡುತ್ತಾರೆ ಎಂದು ಹೇಳಿದರು. ಜೈ ಭೀಮ್ ಜೈ ಕರ್ನಾಟಕ ಎಂದು ಹೇಳಿ ಶುಭವನ್ನು ಕೋರಿದರು.

ವರದಿ ಆಂಟೋನಿ ಬೇಗೂರು