ʼWife For Saleʼ ಎಂದು ಜಾಹೀರಾತು ನೀಡಿದ ಪತಿ: ಟೂರ್ಗೆ ಹೋಗಿದ್ದ ಪತ್ನಿಗೆ ಶಾಕ್!

ಬ್ರಿಟನ್ ಮೂಲದ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಫನ್ನಿಯಾಗಿ ಪೋಸ್ಟ್ ಹಾಕುವ ಮೂಲಕ ಜನರನ್ನು ದಂಗುಗೊಳಿಸಿದ್ದಾರೆ. ಹೌದು ಪ್ರವಾಸಕ್ಕೆ ತೆರಳಿದ್ದ ಪತ್ನಿಗೆ ಮನೆಯಲ್ಲಿ ಕುಳಿತಿದ್ದ ಪತಿ ಶಾಕ್ ನೀಡಿದ್ದಾನೆ. ಏನಿದು ಶಾಕಿಂಗ್ ನ್ಯೂಸ್ ಎಂದು ತಿಳಿಯಬೇಕೇ? ಹಾಗಾದ್ರೆ ಈ ಸುದ್ದಿ ಓದಿ.
ಪ್ರವಾಸಕ್ಕೆಂದು ಪತ್ನಿ ತೆರಳಿದ್ದ ಸಂದರ್ಭದಲ್ಲಿ ಪತಿಯು ʼವೈಫ್ ಫಾರ್ ಸೇಲ್ʼ ಎಂದು ಆಕೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯನ್ನು ಹಳೆಯ ಕಾರ್ಗೆ ಹೋಲಿಕೆ ಮಾಡಿದ್ದಾನೆ.
ಈ ಕುರಿತು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ. ಅದರ ಪ್ರಕಾರ, ಫೋಟೋ ಶೇರ್ ಮಾಡಿದ ವ್ಯಕ್ತಿಯ ಹೆಸರು ರಾಬಿ ಮೆಕ್ಮಿಲನ್. ವೃತ್ತಿಯಲ್ಲಿ ಡಿಸ್ಕೋ ಜಾಕಿಯಾಗಿ ಕೆಲಸ ಮಾಡುತ್ತಿರುವ ಮಿಲನ್, ತನ್ನ ಪತ್ನಿ ಸಾರಾ ಅವರ ಫೋಟೋವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಸಾರಾಳನ್ನು ಖರೀದಿಸಿದರೆ ಆಗುವ ಅನುಕೂಲ, ಅನಾನುಕೂಲಗಳ ಬಗ್ಗೆಯೂ ತಿಳಿಸಿದ್ದಾರೆ.
“ಈಗ ಮಾರಾಟಕ್ಕೆ ಲಭ್ಯವಿಲ್ಲ”:
“ನಾವು ಸುಮಾರು 20 ವರ್ಷಗಳಿಂದ ಒಟ್ಟಿಗೆ ಜೀವನ ಸಾಗಿಸುತ್ತಿದ್ದೇವೆ. ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥೈಸಿಕೊಂಡಿದ್ದೇವೆ. ಪೋಸ್ಟ್ ಮಾಡಿದ ಬಳಿಕ ಅನೇಕರು ಆಕೆಯನ್ನು ಖರೀದಿ ಮಾಡುತ್ತೇವೆ ಎಂದಿದ್ದಾರೆ. ಆದರೆ ದುರಾದೃಷ್ಟವಶಾತ್ ಅವಳನ್ನು ಈಗ ಮಾರಾಟ ಮಾಡುವುದಿಲ್ಲ. ಅವಳು ಮಿಲಿಯನ್ಗೆ ಒಬ್ಬಳು” ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾನೆ.