
ಬೆಂಗಳೂರು : ಇಂದು (ಅ.17) ನಟ ಚಿರಂಜೀವಿ ಸರ್ಜಾ ಅವರ ಹುಟ್ಟು ಹಬ್ಬ. ದೈಹಿಕವಾಗಿ ಅವರು ಇಲ್ಲವೆಂದರೂ ಕನ್ನಡಾಭಿಮಾನಿಗಳ ಹೃದಯಲ್ಲಿ ಸದಾ ಅಮರ.
ಚಿರು ಹುಟ್ಟು ಹಬ್ಬದಂದು ಅವರ ಪತ್ನಿ ಮೇಘನಾ ರಾಜ್ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಬಾವುಕ ನುಡಿಗಳ ಜೊತೆಗೆ ವಿಶೇಷ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.
ಚಿರು ಅವರ ಜೊತೆಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮೇಘನಾ ಅವರು, ʼನನ್ನ ಸಂತೋಷವೆ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು.! ನನ್ನ ನಗುವಿಗೆ ಕಾರಣ ನೀನು.
ಪ್ರೀತಿಯ ಪತಿ ಚಿರು ಐ ಲವ್ ಯೂ ಎಂದು ಭಾವುಕವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇನ್ನು ಮೆಘನಾ ಪೋಸ್ಟ್‌ಗೆ ಅವರ ಅಭಿಮಾನಿಗಳು ಸಹ ಕಾಮೆಂಟ್ ಮಾಡಿ ಚಿರಂಜೀವಿ ಸರ್ಜಾ ಬರ್ತಡೇಗೆ ವಿಶ್ ಮಾಡಿದ್ದಾರೆ.
ಪ್ರೀತಿಸಿ ಮದುವೆಯಾಗಿ ಸುಂದರ ಜೀವನದ ಕನಸು ಕಂಡಿದ್ದ ಜೋಡಿಗಳ ಅನ್ಯೋನ್ಯತೆ ಬಹುಷಃ ಆ ದೇವರಿಗೆ ಇಷ್ಟವಾಗಲಿಲ್ಲ ಅನಿಸುತ್ತೆ. 2020ರ ಜೂನ್ 7ರಂದು ಅವರು ಹೃದಯಾಘಾತದಿಂದ ನಿಧನರಾಗಿದ್ದು ಎಲ್ಲರಿಗೂ ತೀವ್ರ ನೋವು ತರಿಸಿತ್ತು.
ಅಂದಿನ ಘಟನೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ವಿಧಿಯಾಟ… ಜೀವನ ಮುಂದೆ ಸಾಗಲೇಬೇಕು ಅಲ್ಲವೆ..
ಸದ್ಯ ಮೇಘನಾ ರಾಜ್ ಅವರು ತಮ್ಮ ಮಗುವಿನ ನಗು ನೋಡುತ್ತಾ ಜೀವನದ ಪಯಣ ಸಾಗಿಸುತ್ತಿದ್ದಾರೆ. ಅಲ್ಲದೆ ಸಿನಿರಂಗದತ್ತ ಮುಖ ಮಾಡಿದ್ದು ಚಿರು-ಮೇಘನಾ ಅಭಿಮಾನಿಗಳಿ ಖುಷಿ ನೀಡಿದೆ.