
ಬೆಂಗಳೂರು : ಭಾರತೀಯ ಚಿತ್ರರಂಗದಲ್ಲಿ ಸ್ಯಾಂಡಲ್ವುಡ್ ಸಿನಿಮಾಗಳು ಇತಿಹಾಸ ಸೃಷ್ಟಿಸುತ್ತಿವೆ. ಎಲ್ಲರೂ ಕನ್ನಡ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ.
ಸದ್ಯ ಟಾಲಿವುಡ್ ಸ್ಟಾರ್ ನಟ ನಾನಿ ಕನ್ನಡಿಗರ ಸಾಧನೆಯನ್ನು ಹಾಡಿಹೊಗಳಿದ್ದು, ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾಜಧಾನಿಯಲ್ಲಿ ನಡೆದ 2022 ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ನಾನಿ, ಎಂತೆಂಥ ಸಿನಿಮಾಗಳನ್ನು ಬರ್ತೀವೆ ಕನ್ನಡದಿಂದ, ತುಂಬಾ ಹೆಮ್ಮೆ ಅನಿಸುತ್ತಿದೆ.
ಕಾಂತಾರ ಸಿನಿಮಾದ ಹೆಸರು ಎಲ್ಲಾ ಕಡೆ ಕೇಳಿಬರುತ್ತಿದೆ ಎಂದರು. ಇನ್ನು ನಾನಿ ಮಾತಿಗೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಸದ್ಯ ನಾನಿ ಮಾತನಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಇನ್ನೂ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿ, ತೆಲುಗು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಡಬ್ಬ್ ಆಗುತ್ತಿದೆ.
ಜನರು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಎಲ್ಲಿ ನೋಡಿದ್ರೂ ಹೌಸ್ ಪುಲ್ ಬೋರ್ಡ್ ಕಾಣಿಸುತ್ತಿದೆ. ರಿಷಬ್ ಶೆಟ್ಟಿ ನಟನೆಗೆ ಪ್ರೇಕ್ಷಕ ಮಹಾಶಯ ಜೈ ಅಂದಿದ್ದಾರೆ.